ದೇಶಪ್ರಮುಖ ಸುದ್ದಿ

ಡ್ರಗ್ ಕೇಸ್ ನಲ್ಲಿ ಸಿಲುಕಿದ್ದಾಳೆ ನಟಿ ಮುಮೈಥ್ ಖಾನ್

ದೇಶ(ಮುಂಬೈ),ಜು.27:- ಬಿಗ್ ಬಾಸ್ ರಿಯಾಲಿಟಿ ಶೋ ಮನೆ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತದೆ. ಇದೇ ಮೊದಲ ಬಾರಿಗೆ ತೆಲುಗು ಮತ್ತು ತಮಿಳಿನಲ್ಲಿಯೂ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ ಎನ್ನುವುದೇ  ಸುದ್ದಿಯಾಗಿತ್ತು. ಇದೀಗ  ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿರುವ ನಟಿ ಮುಮೈಥ್ ಖಾನ್  ಚರ್ಚಾ ವಿಷಯವಾಗಿದ್ದಾಳೆ. ನಟ ಸಲ್ಮಾನ್ ಖಾನ್ ಜೊತೆ ‘ಲಕಿ’ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಈಕೆ ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದಾಳೆ. ಇದರಿಂದ ಈಕೆಯನ್ನು ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಹೊರ ಹಾಕಲಾಗಿದೆಯಂತೆ. ಬಾಲಿವುಡ್ ನ ಹಲವು ಚಿತ್ರಗಳಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದು, ಮುನ್ನಾಬಾಯಿ ಎಂಬಿಬಿಎಸ್ ನ ‘ದೇಖ್ ಲೇ ಆಂಖೊಮೆ’  ಐಟಂ ಸಾಂಗ್ ಗೆ ಹೆಜ್ಜೆ ಹಾಕಿ ಸಾಕಷ್ಟು ಪ್ರಸಿದ್ದಿ ಪಡೆದಿದ್ದಳು.

ಸುಮಾರು 15 ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿಯೂ ಕಾಣಸಿಕೊಂಡಿದ್ದಳು. ಡ್ರಗ್ ರಾಕೆಟ್ ನಲ್ಲಿ ದಕ್ಷಿಣ ಭಾರತದ ಹಲವು ತಾರೆಯರ ಹೆಸರು ಕೇಳಿ ಬಂದಿದ್ದು, ಹಲವು ತಾರೆಗಳ ವಿಚಾರಣೆ ನಡೆಯುತ್ತಿದೆ. ಇದೀಗ ಮುಮೈಥ್ ಖಾನ್ ನ್ನು ವಿಶೇಷ ತನಿಖಾದಳದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆಗೆ ಹಾಜರುಪಡಿಸಲೋಸ್ಕರ ಒಂದು ದಿನದ ಮಟ್ಟಿಗೆ ಬಿಗ್ ಬಾಸ್ ನಿಂದ ಹೊರಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. (ಎಸ್.ಎಚ್)

Leave a Reply

comments

Related Articles

error: