ಮೈಸೂರು

ಐಕ್ಯತೆಗೆ ಧಕ್ಕೆಯಾಗುವ ಪ್ರತ್ಯೇಕ ಧ್ವಜದ ಕೂಗನ್ನು ಕೈ ಬಿಡಲು ಮನವಿ

ಮೈಸೂರು,ಜು.27 : ರಾಜ್ಯಕ್ಕೆ ಪ್ರತ್ಯೇಕ ಧ್ವಜವಾದರೆ ದೇಶದ ಅಖಂಡತೆಗೆ ಹಾಗೂ ಭದ್ರತೆಗೆ ಧಕ್ಕೆಯಾಗಲಿದ್ದು  ಪ್ರತ್ಯೇಕ ಧ್ವಜದ ಕೂಗನ್ನು ಕೈಬಿಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ದಿನೇಶ್ ಗೌಡ ಒತ್ತಾಯಿಸಿದರು.

ಸರ್ಕಾರ ಮಾಡಬೇಕಾದ ಕೆಲಸಗಳು ಬೆಟ್ಟದಷ್ಟು ಇದ್ದರೂ ಆ ಕಡೆ ಗಮನಹರಿಸದೆ ರಾಜ್ಯ್ಕಕೆ ಪ್ರತ್ಯೇಕ ಧ್ವಜ ಬೇಕು ಎಂದು ಕೇಳುತ್ತಿರುವುದು, ಆ ದಿಕ್ಕಿನಲ್ಲಿ ಚಿಂತನೆ ನಡೆಸುತ್ತಿರುವುದು ಪ್ರಜಾಭಿಪ್ರಾಯಕ್ಕೆ ವಿರುದ್ಧವಾಗಿದೆ. ರಾಜ್ಯಕ್ಕೇನಾದರೂ ಪ್ರತ್ಯೇಕ ಧ್ವಜ ಮಾಡಿದ್ದೇ ಆದಲ್ಲಿ ರಾಷ್ಟ್ರದ ಒಕ್ಕೂಟ ವ್ಯವಸ್ಥೆಗೆ ಚ್ಯುತಿಯುಂಟಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ರಾಜ್ಯದಲ್ಲಿ ಆರೋಗ್ಯಕರ ವಾತಾವರಣವೂ ನಿರ್ಮಾಣವಾಗಬೇಕಾದರೆ ಸರ್ಕಾರ ಅನಗತ್ಯ ಗೊಂದಲಗಳಿಗೆ ತೆರೆ ಏಳೆಯಬೇಕು, ಇಲ್ಲವಾದಲ್ಲಿ ಪಕ್ಷದಿಂದ ಕಾನೂನು ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.

ಸಂಚಾಲಕರಾದ ಬಿ.ಆರ್.ಲೋಕೇಶ್, ಹೆಚ್.ಪಿ. ಗುಣಶೇಖರ್, ಚಂದ್ರು, ಬಿ.ಆದರ್ಶ, ಸಿ.ಡಿ.ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: