ಮೈಸೂರು

ಮಾಜಿ ಸೈನಿಕರಿಗೆ ಸನ್ಮಾನ

ಮೈಸೂರು,ಜು.27- ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ತಾಲೂಕಿನ ಸತ್ಯ ಫೌಂಡೇಷನ್ ವತಿಯಿಂದ ಮೂವರು ಮಾಜಿ ಸೈನಿಕರಿಗೆ ಸನ್ಮಾನ ಮಾಡಲಾಯಿತು.
ಕಛೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಅಂದಿನ ಪ್ರಧಾನಿ ವಾಜಪೇಯಿರವರ ಭರವಸೆಯ ಮಾತುಗಳಿಂದ ಪ್ರೇರೇಪಿತರಾದ ನಮ್ಮ ಸೈನಿಕರು ಯುದ್ದದಲ್ಲಿ ಜಯ ಸಾಧಿಸಿದರಾದರೂ 527 ಮಂದಿ ಸೈನಿಕರು ಬಲಿದಾನ ಮಾಡಬೇಕಾಯಿತು. ಅದರಲ್ಲಿ ಕರ್ನಾಟಕದ 18 ಮಂದಿ ದೇಶಕ್ಕಾಗಿ ತಮ್ಮ ಪ್ರಾಣ ನೀಡಿದರೂ ನಮ್ಮ ಆಳುವ ಸರ್ಕಾರಗಳು ನೀತಿಯನುಸಾರ ಅವರಿಗೆ ನೀಡುವ ಸವಲತ್ತು ನೀಡದಿರುವುದು ವಿಷಾದನೀಯ ಎಂದರಲ್ಲದೇ ಯುವ ಪೀಳಿಗೆ ದೇಶ ರಕ್ಷಣೆಗಾಗಿ ಸೇನೆ ಸೇರಲು ಮುಂದೆ ಬರಬೇಕೆಂದು ಯುವಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಸದಸ್ಯ ವರದರಾಜು,ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಸೋಮಣ್ಣ ಮುಖಂಡರಾದ ಪವನ್,ಮುರುಗೇಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: