
ದೇಶಪ್ರಮುಖ ಸುದ್ದಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ – ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭೇಟಿ
ನವದೆಹಲಿ, ಜುಲೈ 27 : ನೂತನ ರಾಷ್ಟ್ರಪತಿಯಾಗಿ ಜುಲೈ 26 ರಂದು ಅಧಿಕಾರ ಸ್ವೀಕರಿಸಿದ ರಾಮ್ ನಾಥ್ ಕೋವಿಂದ್ ಅವರು ಇಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ಮಾತುಕತೆ ನಡೆಸಿದರು. ಕಾರ್ಗಿಲ್ ವಿಜಯ ದಿವಸದ (ಜುಲೈ 26) 18ನೇ ವರ್ಷಾಚರಣೆ ಮರುದಿನದ ಈ ಭೇಟಿ ಸೌಜನ್ಯದ ಭೇಟಿ ಎನ್ನಲಾಗಿದೆ. ಸೇನಾ ಕ್ಷೇತ್ರದ ಇತ್ತೀಚಿನ ಬೆಳವಣಿಗೆ ಮತ್ತು ಭಾರತದ ಭದ್ರತೆ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿದುಬಂದಿದೆ.
-ಎನ್.ಬಿ.