ದೇಶಪ್ರಮುಖ ಸುದ್ದಿವಿದೇಶ

ಒಂದು ಬಿಲಿಯನ್‍ ದಾಟಿದ ವಾಟ್ಸಾಪ್ ಬಳಕೆದಾರರ ಸಂಖ್ಯೆ

ಮುಂಬೈ, ಜುಲೈ 27 : ತ್ವರಿತ ಸಂದೇಶ ರವಾನೆ ಅಪ್ಲಿಕೇಷನ್ ವಾಟ್ಸಾಪ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಪ್ರಪಂಚದಾದ್ಯಂತ ಪ್ರತಿದಿನ 1 ಬಿಲಿಯನ್‍ಗಿಂತಲೂ ಹೆಚ್ಚು ಮಂದಿ ವಾಟ್ಸಾಪ್‍ ಬಳಕೆ ಮಾಡುತ್ತಿದ್ದಾರೆ ಎಂದು ವರದಿಳು ತಿಳಿಸಿವೆ.  ವರದಿಯ ಪ್ರಕಾರ ತಿಂಗಳೊಂದರಲ್ಲಿ 1.3 ಶತಕೋಟಿಯಷ್ಟು ಜನರು ವಾಟ್ಸಾಪ್ ಬಳಕೆ ಮಾಡುತ್ತಿರುವುದು ತಿಳಿದುಬಂದಿದೆ.

ವಾಟ್ಸಾಪ್ ಸಂದೇಶವನ್ನು 60 ಭಾಷೆಯಲ್ಲಿ ಬಳಸಬಹುದಾಗಿದ್ದು, ಕಂಪನಿಯ ಪ್ರಕಾರ ಪ್ರತಿದಿನ 55 ಶತಕೋಟಿ ಸಂದೇಶ ವಿನಿಮಯವಾಗುತ್ತಿವೆ. ಅದರಲ್ಲಿ 1 ಶತಕೋಟಿ ಕೇವಲ ವಿಡಿಯೋ ಸಂದೇಶ. ವಾಟ್ಸಾಪ್ ಅಧಿಕೃತ ಮಾಹಿತಿ ಪ್ರಕಾರ, ಅಪ್ಲಿಕೇಷನ್‍ನಲ್ಲಿ ತಂದಿರುವ ಹೊಸ ಫೀಚರನ್ನು ಕೂಡ ಬಳಕೆದಾರರು ಇಷ್ಟಪಟ್ಟಿದ್ದಾರೆ. 2014ರಲ್ಲಿ ವಾಟ್ಸಾಪ್ ಆರಂಭಿಸಿದಾಗ 350 ದಶಲಕ್ಷ ಬಳಕೆದಾರಇದ್ದರು. ಮೂರು ವರ್ಷದಲ್ಲಿ ಇದರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.

-ಎನ್.ಬಿ.

Leave a Reply

comments

Related Articles

error: