ಕರ್ನಾಟಕ

ಕಬ್ಬಿಗೆ 3 ಸಾವಿರ ರು. ನಿಗದಿಪಡಿಸಿ: ರಾಜ್ಯ ಕಬ್ಬು ಬೆಳೆಗಾರರ ಸಂಘ

kurubur-webಕಬ್ಬು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದಿರುವ ಕಾರಣ ಎಫ್‍ಆರ್‍ಪಿ ದರವನ್ನು ಪರಿಷ್ಕರಿಸಿ ಪ್ರತಿ ಟನ್‍ ಕಬ್ಬಿಗೆ 3 ಸಾವಿರ ರು. ನಿಗದಿಪಡಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.

ರೈತರು ಕಬ್ಬು ಬೆಳೆಯುವ ವೆಚ್ಚ ಹೆಚ್ಚಳವಾಗಿದ್ದು, ಎಸ್‍ಆರ್‍ಪಿ ದರವನ್ನು ಪರಿಷ್ಕರಿಸಿ ಕನಿಷ್ಠ 3,000 ರು. ಆದರೂ ನಿಗದಿ ಮಾಡಬೇಕು. 2015-16ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮು ಮುಗಿದಿದೆ. ಎಸ್‍ಆರ್‍ಪಿ ದರ ಆಧರಿಸಿ ಕಾರ್ಖಾನೆಗಳು ರೈತರಿಗೆ ಹಣ ನೀಡಿವೆ. ಇದಕ್ಕೆ ಶೇ.15ರಷ್ಟು ಬಡ್ಡಿ ಸೇರಿಸಿ ಕೊಡಬೇಕೆಂದು ರೈತ ಮುಖಂಡರು ಆಗ್ರಹಿಸಿದರು.

ಸಕ್ಕರೆ ದರ ಪ್ರತಿ ಕ್ವಿಂಟಲ್‍ಗೆ 4 ಸಾವಿರ ರೂ. ದಾಟಿದೆ. ಕಬ್ಬು ಬೆಳೆಯುವ ರೈತರಿಗೆ ಮಾತ್ರ ಕಳೆದ ವರ್ಷ 2,300 ರು. ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Leave a Reply

comments

Related Articles

error: