ದೇಶಪ್ರಮುಖ ಸುದ್ದಿ

ರಾಮೇಶ್ವರಂ-ಅಯೋಧ್ಯೆ ಸಂಪರ್ಕ ಕಲ್ಪಿಸುವ ಶ್ರದ್ಧಾಸೇತು ಎಕ್ಸ್’ಪ್ರೆಸ್‍ಗೆ ಮೋದಿ ಚಾಲನೆ

ರಾಮೇಶ್ವರಂ, ಜುಲೈ 27 : ಅಯೋಧ್ಯೆ – ರಾಮೇಶ್ವರಂ ನಡುವೆ ಸಂಪರ್ಕ ಕಲ್ಪಿಸುವ ಶ್ರದ್ಧಾಸೇತು ಎಕ್ಸ್’ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ರಾಮೇಶ್ವರಂನಿಂದ 15 ಕಿ.ಮೀ ದೂರದ ಮಂಡಪಂ ಇಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಚಾಲನೆ ನೀಡಿದ ಮೋದಿ, ವಾರಕೊಮ್ಮೆ ರಾಮೇಶ್ವರಂನಿಂದ ಹೊರಟು ಅಯೋಧ್ಯೆಗೆ ತಲುಪಿ ಮತ್ತೆ ರಾಮೇಶ್ವರಂಗೆ ಮರಳುವ ಈ ರೈಲು ರಾಮನಿಗೆ ಸಂಬಂಧಪಟ್ಟ 2 ಪ್ರಮುಖ ಸ್ಥಳಗಳನ್ನು ಜೋಡಿಸುತ್ತದೆ ಎಂದು ಮೋದಿ ಹೇಳಿದರು.

ರಾಮೇಶ್ವರಂ ರಾಮನೊಂದಿಗೆ ಸಂಬಂಧ ಹೊಂದಿದೆ. ಈ ರೈಲು ರಾಮನ ಜನ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತಿರುವುದು ಬಹಳ ಸಂತೋಷವನ್ನುಂಟು ಮಾಡಿದೆ ಎಂದು ಅವರು ಈ ಸಂದರ್ಭ ಹೇಳಿದರು.

ಈ ರೈಲು ಜೈವಿಕ ಶೌಚಾಲಯ ವ್ಯವಸ್ಥೆಯನ್ನು ಹೊಂದಿದ್ದು ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನಕ್ಕೂ ಸಹಕಾರಿಯಾಗಿದೆ ಎಂದರು.

-ಎನ್.ಬಿ.

Leave a Reply

comments

Related Articles

error: