ಮೈಸೂರು

ಯಾರಿಗೂ ಲಂಚ ನೀಡದಿರಿ : ಲಂಚ ಮುಕ್ತ ಕರ್ನಾಟಕ ವೇದಿಕೆ ಆಗ್ರಹ

ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು. ಯಾರಿಗೂ ಲಂಚ ನೀಡದಿರಿ. ಅದರಲ್ಲೂ ಸರ್ಕಾರಿ ಕಚೇರಿ ನೌಕರರಿಗೆ ಯಾವುದೇ ಕಾರಣಕ್ಕೂ ಲಂಚ ನೀಡಬಾರದು ಎಂದು ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರವಿ ಆಗ್ರಹಿಸಿದ್ದಾರೆ.

ಮೈಸೂರಿನ ನಜರಾಬಾದ್ ನಲ್ಲಿರುವ ಮಿನಿ ವಿಧಾನಸೌಧದ ಹೊರ ಆವರಣದಲ್ಲಿ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಲಂಚ ನೀಡಬಾರದು ಎಂಬ ಉದ್ದೇಶದಿಂದ ಜಾಗೃತಿ ಮೂಡಿಸಲು ಲಂಚಮುಕ್ತ ಕರ್ನಾಟಕ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾದ ಅಭಿಯಾನದಲ್ಲಿ ಪಾಲ್ಗೊಂಡ ರವಿ ಮಾತನಾಡಿ ಕೆಲವರು ತಮ್ಮ ಕೆಲಸ ಬೇಗ ಮುಗಿದುಹೋಗಲಿ ಎನ್ನುವ ದೃಷ್ಟಿಯಿಂದ ತಾವೇ ಮೊದಲು ಲಂಚದ ಆಮಿಷ ಒಡ್ಡುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಲಂಚನೀಡಲಾಗದ ಅಸಹಾಯಕ ವ್ಯಕ್ತಿಗಳು ತಮ್ಮ ಕೆಲಸ ಪೂರ್ಣಗೊಳ್ಳಲು ಸಾವಿರ ಸಲ ಅಲೆದಾಡಬೇಕು. ಇದಕ್ಕೆ ಜವಾಬ್ದಾರರು ಯಾರು ಎಂದು ಪ್ರಶ್ನಿಸಿದರು. ಯಾರಾದರೂ ಲಂಚ ಕೇಳಿದರೆ ತಕ್ಷಣ ತಮಗೆ ಮಾಹಿತಿಯನ್ನು ನೀಡಿ ಎಂದರು

ಮಿನಿ ವಿಧಾನಸೌಧದ ಎಲ್ಲ ಕಚೇರಿಗೂ ಭೇಟಿ ನೀಡಿದ ಅವರು ಕೆಲವು ಅಧಿಕಾರಿಗಳ ಮುಂದೆ ನಾಮಫಲಕ ಇಲ್ಲದಿರುವುದನ್ನು ಗಮನಿಸಿ ಅಸಮಾಧಾನ ಹೊರಹಾಕಿದರು.

ವೇದಿಕೆಯ ಮುಖಂಡರಾದ ಶಿವಾನಂದ, ನಂಜುಂಡಸ್ವಾಮಿ, ಮಂಜುನಾಥ, ನಾಗೇಂದ್ರ, ಬಸವರಾಜ್, ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ನಜರಾಬಾದ್ ನ ಪದವಿಪೂರ್ವ ಕಾಲೇಜಿನಲ್ಲಿ ಸಕಾಲ ಮತ್ತು ಆರ್ ಟಿಐ ಕುರಿತು ತರಬೇತಿ ಶಿಬಿರ ನಡೆಸಲಾಯಿತು.

Leave a Reply

comments

Related Articles

error: