ಸುದ್ದಿ ಸಂಕ್ಷಿಪ್ತ

ಕಾಳು ಮೆಣಸಿನಲ್ಲಿ ಬುಡ ಕೊಳೆರೋಗದ ನಿರ್ವಹಣೆಯ ಮೂಂಚೂಣಿ ಪ್ರಾತ್ಯಕ್ಷಿಕೆ

ಮಡಿಕೇರಿ, ಜು.28: ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರ ವತಿಯಿಂದ ಕಾಳು ಮೆಣಸಿನಲ್ಲಿ ಬರುವ ಶೀಘ್ರ ಸೊರಗು ರೋಗದ ಹತೋಟಿಯ ಬಗ್ಗೆ ವಿರಾಜಪೇಟೆ ತಾಲ್ಲೂಕಿನ ಕುಂದಾ ಗ್ರಾಮದ ತಿತಮಾಡ ರಮೇಶ್ ಎಂಬುವರ ಕಾಳುಮೆಣಸಿನ ತೋಟದಲ್ಲಿ ಮೂಂಚೂಣಿ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಂಚೂಣಿ ಪ್ರಾತ್ಯಕ್ಷಿಕೆಯ ಉದ್ದೇಶ ನೂತನವಾಗಿ ಬಿಡುಗಡೆಯಾಗಿರುವ ತಂತ್ರಜ್ಞಾನವನ್ನು ಜಿಲ್ಲೆಯ ಆಯ್ದ ರೈತರುಗಳ ತಾಕುಗಳಲ್ಲಿ ಅಳವಡಿಸಿದ ನೂತನ ತಂತ್ರಜ್ಞಾನದ ಪ್ರಯೋಜನವನ್ನು ಇತರ ರೈತರುಗಳಿಗೆ ತಿಳಿಯಪಡಿಸುವುದಗಿದೆ.

ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲುವಿನ ಸಸ್ಯ ಸಂರಕ್ಷಣಾ ತe್ಞರಾದ ವೀರೇಂದ್ರಕುಮಾರ್ ಕೆ.ವಿ ರವರು  ಕಾಳು ಮೆಣಸಿನಲ್ಲಿ ಬರುವ ಶೀಘ್ರ ಸೊರಗು ರೋಗದ ನಿರ್ವಹಣೆಗಾಗಿ ತಂತ್ರಜ್ಞಾನ ಪರೀಕ್ಷೆಯ ಮುಖಾಂತರ ಕಂಡುಹಿಡಿದಿರುವ ನೂತನ ತಂತ್ರಜ್ಞಾನವಾದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರುಘಟ್ಟ, ಬೆಂಗಳೂರು ಇವರು ಅಭಿವೃದ್ದಿ ಪಡಿಸಿದ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ (ಅರ್ಕಾ ಮೈಕ್ರೊಬಿಯಲ್ ಕನ್ಸರ್ಷಿಯಾ) ದ್ರಾವಣವನ್ನು ಬುಡಕ್ಕೆ ಸುರಿಯುವ ಮತ್ತು ಭಾರತೀಯಾ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ, ಕ್ಯಾಲಿಕಟ್ ಇವರು ಶಿಫಾರಸ್ಸು ಮಾಡಿದ, ಪೊಟ್ಯಾಸಿಯಂ ಪಾಸ್‍ಪೋನೇಟ್ ದ್ರಾವಣವನ್ನು ಸಿಂಪಡಿಸುವ ಹಾಗೂ ಪ್ಲಾಸ್ಟಿಕ್ ಹಾಳೆಯಿಂದ ಬುಡವನ್ನು ಮುಚ್ಚುವ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದಾರೆ. ಇದರ ಜೊತೆಗೆ ಸಮಗ್ರ ಬೇಸಾಯ ಕ್ರಮಗಳಾದ ಗೊಬ್ಬರಗಳನ್ನು ನೀಡುವುದು, ಕಾಲಕಾಲಕ್ಕೆ ಬೋರ್ಡೊ ದ್ರಾವಣವನ್ನು ಸಿಂಪಡಿಸುವುದು, ಮುಂತಾದವುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಗತಿಪರ ಕೃಷಿಕರಾದ ತಿತಮಾಡ ರಮೇಶ್‍ರವರು ಆಸಕ್ತಿಯಿಂದ ನೂತನವಾಗಿ ಬಿಡುಗಡೆಯಾಗಿರುವ ತಂತ್ರಜ್ಞಾನವನ್ನು ತಮ್ಮ ತೋಟದಲ್ಲಿ ಅಳವಡಿಸಿದ್ದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಈ ಸಂಧರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಸಾಜೂ ಜಾರ್ಜ್ ಮತ್ತು ತೋಟಗಾರಿಕೆ ವಿಷಯ ತಜ್ಞಾರಾದ ಡಾ.ಪ್ರಭಾಕರರವರು ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ (ಅರ್ಕಾ ಮೈಕ್ರೊಬಿಯಲ್ ಕನ್ಸರ್ಷಿಯಾ) ದ್ರಾವಣವನ್ನು ಬುಡಕ್ಕೆ ಸುರಿಯುವ ಮತ್ತು ಭಾರತೀಯಾ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ, ಕ್ಯಾಲಿಕಟ್ ಇವರು ಶಿಫಾರಸ್ಸು ಮಾಡಿದ,  ಪೊಟ್ಯಾಸಿಯಂ ಪಾಸ್‍ಪೋನೇಟ್ ದ್ರಾವಣವನ್ನು ಸಿಂಪಡಿಸುವ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: