ಸುದ್ದಿ ಸಂಕ್ಷಿಪ್ತ

ನೆರೆಹೊರೆಯವರ ಕಿರುಕುಳಕ್ಕೆ ಬೇಸರ: ವ್ಯಕ್ತಿ ಆತ್ಮಹತ್ಯೆ

ನೆರೆಹೊರೆಯವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತ ವ್ಯಕ್ತಿಯನ್ನು ಕೆ.ಆರ್.ನಗರ ತಾಲೂಕು ಸಾಲಿಗ್ರಾಮದ ಗಂಧನಹಳ್ಳಿ ನಿವಾಸಿ ಜಯರಾಮ್(41)ಎಂದು ಗುರುತಿಸಲಾಗಿದೆ.

ಬಹಳ ದಿನಗಳಿಂದ ನೆರೆಹೊರೆಯವರು ಇವರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬಸವರಾಜ್ ತುಂಬ ಬೇಸರಗೊಂಡಿದ್ದು ಆತ್ಮಹತ್ಯೆಗೆ ಶರಣಾಗಿರಬೇಕೆಂದು ಶಂಕಿಸಲಾಗಿದೆ.

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: