ಮೈಸೂರು

ರುದ್ರೇಶ್ ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ

ಆರ್‍ಎಸ್‍ಎಸ್‍ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣವನ್ನು ಖಂಡಿಸಿ ಮೈಸೂರಿನ ಮಿನಿ ವಿಧಾನಸೌಧದ ಬಳಿ ಗ್ರಾಮಾಂತರ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಯಿತು.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಧರ್ಮವನ್ನು ನಾಶ ಮಾಡಲು ಕೇರಳದಿಂದ ಹಂತಕರನ್ನು ಕರೆಸಿ ನಿಷ್ಠಾವಂತ ಕಾರ್ಯಕರ್ತರ ಹತ್ಯೆ ಮಾಡಲಾಗುತ್ತಿದೆ ಎಂದು ಯುವ ಮೋರ್ಚಾ ಗ್ರಾಮಾಂತರ ಬಿಜೆಪಿ ಮುಖಂಡ ಮಹದೇವ ಸ್ವಾಮಿ ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ‌ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಪಣೀಶ್ ಮಾರ್ಬಳ್ಳಿ ಮೂರ್ತಿ, ಬಿ.ಪಿ‌. ಬೋರೆಗೌಡ. ರಾಮಕೃಷ್ಣಪ್ಪ. ಅಶೋಕ, ಉಮೇಶ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Leave a Reply

comments

Related Articles

error: