ಕ್ರೀಡೆಪ್ರಮುಖ ಸುದ್ದಿ

ಭಾರತ-ಶ್ರೀಲಂಕಾ ಮೊದಲ ಟೆಸ್ಟ್: ೨೯೧ಕ್ಕೆ ಶ್ರೀಲಂಕಾ ಆಲೌಟ್

ಪ್ರಮುಖ ಸುದ್ದಿ, ಗಾಲ್, ಜು.೨೮: ಭಾರತ ಹಾಗೂ ಶ್ರೀಲಂಕಾ ನಡುವಣ ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ೨೯೧ರನ್‌ಗಳಿಗೆ ಆಲೌಟ್ ಆಗಿದ್ದು ಸಂಕಷ್ಟಕ್ಕೆ ಸಿಲುಕಿದೆ
ಭಾರತದ ಮೊದಲ ಇನ್ನಿಂಗ್ಸ್‌ನ ೬೦೦ರನ್‌ಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಲಂಕನ್ನರು ೨ನೇ ದಿನದಾಟಕ್ಕೆ ೫ ವಿಕೆಟ್ ಕಳೆದುಕೊಂಡು ೧೫೫ರನ್ ಗಳಿಸಿದ್ದರು. ೧೫೫ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿದ ಲಂಕನ್ನರಿಗೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದ್ದಾರೆ. ೫೪ರನ್‌ಗಳಿಂದ ಮೂರನೆ ದಿನದಾಟ ಆರಂಭಿಸಿದ ಏಂಜಲೋ ಮ್ಯಾಥ್ಯೂಸ್ ೮೩ರನ್‌ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದ ಡಿಕ್‌ವೆಲ್ ಕೇವಲ ೮ ರನ್ ಗಳಿಸಿ ನಿರ್ಗಮಿಸಿದರು. ನಂತರ ಬಂದ ಹೆರಾತ್ ೯, ಪ್ರದೀಪ್ ೧೦ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ನೆಲಕಚ್ಚಿ ನಿಂತು ಭಾರತದ ಬೌಲರ್‌ಗಳ ಬೆವರಿಳಿಸಿದ ದಿಲ್ರುವಾನ್ ಪೆರೆರಾ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರಲ್ಲದೆ ೯೨ ರನ್‌ಗಳಿಸಿ ಅಜೇಯರಾಗುಳಿದರು. ಆದರೆ ಉಳಿದ ಯಾವೊಬ್ಬ ಆಟಗಾರನೂ ಸಾಥ್ ನೀಡದ ಕಾರಣ ಶ್ರೀಲಂಕಾ ೭೮.೩ ಓವರ್‌ಗಳಿಸಿ ೨೯೧ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ೩೦೯ರನ್‌ಗಳ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ.
ಭಾರತದ ಪರ ಜಡೇಜಾ ೩, ಶಮಿ ೨, ಅಶ್ವಿನ್, ಉಮೇಶ್ ಯಾದವ್ ಹಾಗೂ ಪಾಂಡ್ಯ ತಲಾ ೧ ವಿಕೆಟ್ ಪಡೆದರು. (ವರದಿ ಬಿ.ಎಂ)

Leave a Reply

comments

Related Articles

error: