ಮೈಸೂರು

ಯುವ ಜನತೆಯಿಂದ ಕನ್ನಡವನ್ನು ಕಟ್ಟಿ ಉಳಿಸಿ ಬೆಳೆಸುವ ಕೆಲಸವಾಗಬೇಕು : ಡಾ. ವೈ.ಡಿ.ರಾಜಣ್ಣ

ಮೈಸೂರು,ಜು.28:- ಯುವಜನತೆಯಿಂದ ಕನ್ನಡವನ್ನು ಕಟ್ಟಿ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ  ಡಾ.ವೈ.ಡಿ.ರಾಜಣ್ಣ ತಿಳಿಸಿದರು.

ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿಜಯ ವಿಠಲ ಸಂಯುಕ್ತ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾದ ಕುವೆಂಪು ಕಾವ್ಯನಮನ ಕಾರ್ಯಕ್ರಮವನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಡಾ.ವೈ.ಡಿ.ರಾಜಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಬೇರೆ ಭಾಷೆಗಳನ್ನು ಕಲಿಯಬೇಕಾಗಿರುವುದು ಅನಿವಾರ್ಯ ಅದರ ಜೊತೆ ಕನ್ನಡಕ್ಕೂ ಹೆಚ್ಚಿನ ಮಹತ್ವ ನೀಡಿ ಕನ್ನಡವನ್ನು ಉಳಿಸುವ ಕೆಲಸ ಮಾಡಬೇಕು ಎಂದರು.  ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದ್ದು, ಎಷ್ಟೋ ಕವಿಗಳು, ಸಾಹಿತಿಗಳು ಕನ್ನಡಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮಹಾನ್ ಕವಿ ಕುವೆಂಪು ಅವರ ಕನ್ನಡ ಕೃತಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದುಕೊಂಡಿದೆ ಎಂದರಲ್ಲದೇ ಕನ್ನಡಕ್ಕಾಗಿ ಕುವೆಂಪು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ನೀಲಗಿರಿ ಎಂ.ತಳವಾರ್, ಲೇಖಕ ಗುಬ್ಬಿಗೂಡು ರಮೇಶ್, ಆರ್.ವಾಸುದೇವ್ ಭಟ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: