ದೇಶಪ್ರಮುಖ ಸುದ್ದಿ

ನೀವು ನಮ್ಮ ದೇಶದ ಪ್ರಧಾನ ಮಂತ್ರಿಯಾಗಿದ್ದರೆ..? ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮಾಡಿದ ಪಾಕಿಸ್ತಾನಿ ಮಹಿಳೆ

ದೇಶ(ನವದೆಹಲಿ)ಜು.28:-ಸಾಮಾಜಿಕ ಜಾಲತಾಣದಲ್ಲಿ ವಿದೇಶಾಂಗ ಸಚಿವೆ  ಸುಷ್ಮಾ ಸ್ವರಾಜ್ ಸುದ್ದಿ ಬರುತ್ತಲೇ ಇರುತ್ತದೆ. ಅವರ ವ್ಯಕ್ತಿತ್ವವೇ ಅಂಥಹದ್ದು, ಸದಾ ಸಹಾಯ ಹಸ್ತ ನೀಡುವ ಅವರ ಸ್ವಭಾವವನ್ನು ನೋಡಿ ಪಾಕಿಸ್ತಾನಿ ಮಹಿಳೆಯೋರ್ವಳು ನೀವು ನಮ್ಮ ಪ್ರಧಾನಿಯಾಗಿದ್ದರೆ..? ಎಂದಿದ್ದಾರಂತೆ.

ಸಾಮಾಜಿಕ ಜಾಲತಾಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಸಾಲಿನಲ್ಲಿ  ಪಾಕಿಸ್ತಾನಿ ಮಹಿಳೆಯ ಹೆಸರೂ ಸೇರಿಕೊಂಡಿದೆ. ಎಷ್ಟರಮಟ್ಟಿಗೆ ಅವಳು ಸುಷ್ಮಾಸ್ವರಾಜ್ ಕುರಿತು ಭಾವನೆಗಳನ್ನು ವ್ಯಕ್ತಪಡಿಸಿದ್ದಾಳೆಂದರೆ ಇದನ್ನು ತಿಳಿದ ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ಕಠೋರರಾಗುವ ಸಾಧ್ಯತೆಗಳೂ ಇವೆಯಂತೆ.

ಪಾಕಿಸ್ತಾನಿ ಪ್ರಜೆಯೋರ್ವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾದ ಅವಶ್ಯಕತೆಯಿತ್ತು. ಆತನ ಕಡೆಯಿಂದ ಹಿಜಾಬ್ ಆಸೀಫ್ ಎಂಬ ಪಾಕಿಸ್ತಾನಿ ಮಹಿಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಲ್ಲಿ ಸಹಾಯ ಕೇಳಿದ್ದರು. ಅದಕ್ಕೆ ಉತ್ತರಿಸಿದ ಸುಷ್ಮಾಸ್ವರಾಜ್ ಶೀಘ್ರದಲ್ಲಿಯೇ ಕಾರ್ಯ ನಡೆಸಿಕೊಡುವುದಾಗಿ ತಿಳಿಸಿದ್ದರು. ಇದರಿಂದ ಸಂತಸಗೊಂಡ ಮಹಿಳೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ  ‘ನಿಮಗೆ ನಾನು ಏನೆಂದು ಹೇಳಲಿ, ಸೂಪರ್ ಮಹಿಳೆ, ದೇವತೆ, ನಿಮ್ಮ ಉಪಕಾರವನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ಹಾರೈಕೆಯಿಂದ ನೀವು ನಮ್ಮ ಪ್ರಧಾನ ಮಂತ್ರಿಯಾಗಿದ್ದರೆ ಈ ದೇಶವೇ ಬದಲಾಗುತ್ತಿತ್ತು’ ಎಂದಿದ್ದಾರಂತೆ.  (ಎಸ್.ಎಚ್)

Leave a Reply

comments

Related Articles

error: