ಮೈಸೂರು

ಹ್ಯೂಮೆನ್ ಟಚ್ ವಾರ್ಷಿಕೋತ್ಸವ

ಮೈಸೂರಿನಲ್ಲಿ ಇತ್ತೀಚೆಗೆ ಹ್ಯೂಮೆನ ಟಚ್ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ವಾರ್ಷಿಕೋತ್ಸವ ಪ್ರಯುಕ್ತ ಅನಾಥಾಶ್ರಮದ ನೂರು ಮಕ್ಕಳನ್ನು ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಗೆ ಕರೆದೊಯ್ಯಲಾಗಿತ್ತು. ಮಕ್ಕಳು ಅಲ್ಲಿ ದಿನವಿಡೀ ಆಡಿ ಕುಣಿದು ಕುಪ್ಪಳಿಸಿದರು. ಅಷ್ಟೇ ಅಲ್ಲದೇ ಮಕ್ಕಳಿಗೆ ಆಹಾರ ಮತ್ತು ಉಡುಗೊರೆಗಳನ್ನು ನೀಡಲಾಯಿತು.

ಹ್ಯೂಮೆನ ಟಚ್ ಸಂಸ್ಥೆಯು ಸಾಮಾಜ ಸೇವೆಯನ್ನು ನಡೆಸುವ ಸಂಸ್ಥೆಯಾಗಿದೆ. ಇದು ಮೈಸೂರು ಮೂಲದ ಜೈನ ಯುವಕರ ಸಂಸ್ಥೆಯಾಗಿದ್ದು, ನಿಯತವಾಗಿ ಅವಶ್ಯಕತೆಯುಳ್ಳ ಬಡವರಿಗೆ ಆರೋಗ್ಯಯುತ ಬೆಳಗಿನ ಉಪಹಾರಗಳನ್ನು ನೀಡುತ್ತಿದೆ.

Leave a Reply

comments

Related Articles

error: