ಲೈಫ್ & ಸ್ಟೈಲ್

ಹಣ್ಣುಗಳಷ್ಟೇ ಅಲ್ಲದೆ ಸಿಪ್ಪೆಗಳಲ್ಲಿಯೂ ಅಡಗಿದೆ ಆರೋಗ್ಯದ ಗುಟ್ಟು

ಸಾಮಾನ್ಯವಾಗಿ ಎಲ್ಲರೂ ಹಣ್ಣುಗಳನ್ನು ತಿಂದ ನಂತರ ಸಿಪ್ಪೆಯನ್ನು ಕಸ ಎಂದು ಬಿಸಾಡುವುದು ಸರ್ವೇ ಸಾಮಾನ್ಯ.ಆದರೆ ಹಣ್ಣಿನ ಸಿಪ್ಪೆಯಲ್ಲೂ ಸಹ ಅನೇಕ ಔಷಧೀಯ ಗುಣಗಳಿವೆ.

ಕಲ್ಲಂಗಡಿ ಹಣ್ಣು….

ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಲವು ಪೋಷಕಾಂಶಗಳಿಂದ ಕೂಡಿದೆ. ಆರೋಗ್ಯಕ್ಕೆ ಉತ್ತಮ ಮತ್ತು ತೂಕ ಕಡಿಮೆಯಾಗಲು ಸಹಾಯಕವಾಗಿದೆ. ಸಿಪ್ಪೆಯನ್ನು ಚರ್ಮದ ಮೇಲೆ ಉಜ್ಜಿಕೊಳ್ಳುವುದರಿಂದ ಚರ್ಮದ ಮೇಲಿನ ಧೂಳು(ಡಸ್ಟ್) ಹೋಗುತ್ತದೆ.

ಕಿತ್ತಳೆ ಹಣ್ಣು….

ತೂಕ ಇಳಿಸಿಕೊಳ್ಳಲು ಕಿತ್ತಳೆಹಣ್ಣಿನ ಸಿಪ್ಪೆ ತುಂಬಾ ಸಹಾಯಕವಾಗುತ್ತದೆ. ಹಾಗೆ ಇದು ನ್ಯಾಚುರಲ್ ಸ್ಕ್ರಬ್, ಬ್ಲೀಚಿಂಗ್ ನಂತೆ ಚರ್ಮದ ಮೇಲೆ ಅನೇಕ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಎಸಿಡಿಟಿಯಿಂದ ಬಳಲುತ್ತಿರುವವರಿಗೆ ಉತ್ತಮ ಔಷಧಿ. ಅಷ್ಟೇಅಲ್ಲ ಕಿತ್ತಳೆ ಪೀಲ್ಸ್ ಕ್ಯಾನ್ಸರ್ ರಿಸ್ಕನ್ನು ಕಡಿಮೆಮಾಡುವುದರ ಜೊತೆಗೆ ಹೃದಯ  ಸಂಬಂಧಿತ ರೋಗಗಳನ್ನು ತಡೆಗಟ್ಟಲಿದೆ.

ದಾಳಿಂಬೆ….

ದಾಳಿಂಬೆ ರಕ್ತವನ್ನು ಹೆಚ್ಚಿಸಿ ರಾಷೇಸ್, ಕೂದಲು ಉದುರುವುದು, ತಲೆಯಲ್ಲಿನ ಹೊಟ್ಟು ನಿವಾರಣೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಗಂಟಲು ನೋವು ನಿವಾರಣೆಯಲ್ಲಿಯೂ ದಾಳಿಂಬೆ ಸಿಪ್ಪೆ ಸಹಾಯ ಮಾಡುತ್ತದೆ.

ಬಾಳೆಹಣ್ಣು…..

ಬಾಳೆಹಣ್ಣಿನ ಸಿಪ್ಪೆಯ ಭಾಗದಿಂದ ಹಲ್ಲಿನ ಮೇಲೆ ಉಜ್ಜುವುದರಿಂದ ಹಲ್ಲು ನೈಸರ್ಗಿಕವಾಗಿ, ಬಿಳುಪಾಗಿ ಹೊಳೆಯುವಂತೆ ಮಾಡುತ್ತದೆ.. ಹಾಗೆಯೇ ಬಾಳೆಹಣ್ಣಿನ ಸಿಪ್ಪೆಯನ್ನು ಸುಟ್ಟ ಚರ್ಮದ ಮೇಲಿಟ್ಟರೆ ಗಾಯ ಬೇಗ ವಾಸಿಯಾಗುತ್ತದೆ. ಒಡೆದ ಪಾದಗಳ ಮೇಲೆ ಸಿಪ್ಪೆಯಿಂದ ಸ್ಕ್ರಬ್‍ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು.

ಸೌತೆಕಾಯಿ…..

ಸೌತೆಕಾಯಿ ಸಿಪ್ಪೆಯಲ್ಲಿ ಹೈಪೈಬರ್, ಕಡಿಮೆ ಕ್ಯಾಲರಿಗಳು ಇರುವುದರಿಂದ ತೂಕ ಕಡಿಮೆಮಾಡುತ್ತದೆ. ಸೌತೆಕಾಯಿ ಸಿಪ್ಪೆಯಲ್ಲಿ ಬೀಟಾಕೆರೋಟಿನ್,ವಿಟಮಿನ್, ವಿಟಮಿನ್ಕೆ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ, ಬ್ಲಡ್ ಕ್ಲಾಟ್ಸ್ ನಿವಾರಣೆ,  ಕಣ್ಣಿನ ದೃಷ್ಟಿ ಉತ್ತಮಗೊಳ್ಳಲು ಸಹಾಯವಾಗುತ್ತವೆ.

ಸೇಬು….

ಸೇಬು ಸಿಪ್ಪೆಯನ್ನು ತಿನ್ನುವುದರಿಂದ ಪ್ಲೆವನಾಯಡ್ಸ್, ಕೆಮಿಕಲ್ಸ್ ಕ್ಯಾನ್ಸರ್ ಸೆಲ್ಸ್ ನಾಶವಾಗಲಿದೆ. ಇಮ್ಯೂನಿಟಿ ಹೆಚ್ಚಗುತ್ತದೆ. ಇದರಲ್ಲಿ ಒಬೇಟಿಸಿಟಿಯನ್ನು ಕಡಿಮೆ ಮಾಡುವ ಗುಣವಿರುತ್ತದೆ.

ನಿಂಬೆ…..

ಇದು ಚರ್ಮದ ಮೇಲೆ ನ್ಯಾಚುರಲ್ ಮಾಯಿಶ್ಚರೈಜರ್ ನಂತೆ ಕೆಲಸಮಾಡುತ್ತದೆ. ಸಿಪ್ಪೆಯು ತೂಕ ಕಡಿಮೆಮಾಡಲು, ಹಲ್ಲುಗಳ ಸಮಸ್ಯೆಗಳನ್ನು ನಿವಾರಿಸಲು ಉಪಯೋಗವಾಗುತ್ತದೆ. ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು, ಕ್ಯಾನ್ಸರ್ ನಿಂದ ತೊಂದರೆ ಅನುಭಸುತ್ತಿರುವವರಿಗೆ ಒಳ್ಳೆಯದು. ಯಾಂಟಿಯಾಕ್ಸಿಡೆಂಟ್ಗಳು ಇರುತ್ತವೆ. ಟಾಕ್ಸಿನ್ಸ್ ಗಳನ್ನು ಹೊರಹೋಗುವಂತೆ ಮಾಡುತ್ತದೆ. (ಪಿ.ಜೆ)

Leave a Reply

comments

Related Articles

error: