ದೇಶ

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ನಿರಾಳ

ಭಾರತೀಯ ಚುನಾವಣಾ ಆಯೋಗಕ್ಕೆ ನಕಲಿ ಪದವಿ ಪ್ರಮಾಣಪತ್ರ ನೀಡಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ನೋಟಿಸ್ ನೀಡದಿರಲು ದೆಹಲಿ ಕೋರ್ಟ್ ನಿರ್ಧರಿಸಿದೆ.

ಸ್ಮೃತಿ ಇರಾನಿ ಕೇಂದ್ರ ಸಚಿವೆ ಅನ್ನೋ ಕಾರಣಕ್ಕೆ ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಅವರ ವಿರುದ್ಧ ಕೇಸ್ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ಈ ದೂರನ್ನು ವಜಾಗೊಳಿಸಿದೆ.

2004ರ ಸಾಮಾನ್ಯ ಚುನಾವಣೆ ವೇಳೆ ಸ್ಮೃತಿ ಇರಾನಿಯವರು ಸಲ್ಲಿಸಿದ ದಾಖಲೆಗಳನ್ನು, ಚುನಾವಣಾ ಆಯೋಗ ಕೋರ್ಟ್‍ಗೆ ಸಲ್ಲಿಸಿತ್ತು. 2004, 2011 ಮತ್ತು 2014ರಲ್ಲಿ ನಡೆದ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ನಕಲಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆಂದು ಫ್ರೀಲ್ಯಾನ್ಸ್ ಬರಹಗಾರ ಅಹ್ಮೇರ್ ಖಾನ್ ದೂರು ನೀಡಿದ್ದರು.

ಕೋರ್ಟಿನ ಆದೇಶದ ಮೇರೆಗೆ ದೆಹಲಿ ವಿಶ್ವವಿದ್ಯಾಲಯವು 1996ರಲ್ಲಿ ಸ್ಮೃತಿ ಮುಗಿಸಿದ ಬಿಎ ಪದವಿಯ ಪ್ರಮಾಣ ಪತ್ರವನ್ನು ಸಲ್ಲಿಸಿತ್ತು. ಈ ಪ್ರಮಾಣಪತ್ರವು ಚುನಾವಣಾ ಆಯೋಗಕ್ಕೆ ಸ್ಮೃತಿ ಅವರು ನೀಡಿದ್ದ ಪ್ರಮಾಣ ಪತ್ರದೊಂದಿಗೆ ತಾಳೆಯಾಗಿತ್ತು.

Leave a Reply

comments

Related Articles

error: