ಕರ್ನಾಟಕ

ಸಾಲಬಾಧೆ ತಾಳಲಾಗದೆ ರೈತ ನೇಣಿಗೆ ಶರಣು

ರಾಜ್ಯ(ವಿಜಯಪುರ)ಜು.28:- ಸಿಂದಗಿ ತಾಲೂಕಿನ ಗಣಿಹಾರ ತಾಂಡದಲ್ಲಿ ಸಾಲಬಾಧೆ ತಾಳಲಾಗದೆ  ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತನನ್ನು ಶಂಕರ  ಮೇಗು  ರಾಠೋಡ ( 28) ಎಂದು ಗುರುತಿಸಲಾಗಿದ್ದು, ಈತ  ಬಳಗಾನೂರ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷ  ಮತ್ತು ಕೈ ಸಾಲ ಸೇರಿ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದ.  ಮಳೆ ಬಾರದೆ ಬಿತ್ತಿದ್ದ ಬೆಳೆ  ಕೈ ಕೊಟ್ಟಿದ್ದು, ಸಾಲ ಮರು ಪಾವತಿಸಲಾಗದೇ  ಮನನೊಂದು ರೈತ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಸಿಂದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

comments

Related Articles

error: