ಮನರಂಜನೆ

ಹುಲಿ ಉಳಿಸಿ ಅಭಿಯಾನದಲ್ಲಿ ಫ್ರೀಡಾ ಪಿಂಟೋ

ನವದೆಹಲಿ, ಜು.28-`ಹುಲಿ ಉಳಿಸಿ’ ಜಾಗತಿಕ ಜಾಗೃತಿ ಅಿಭಿಯಾನದಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾ ಖ್ಯಾತಿಯ ಫ್ರೀಡಾ ಪಿಂಟೋ ಭಾಗವಹಿಸಲಿದ್ದಾರೆ.
ಡಿಸ್ಕವರಿ ಚಾನೆಲ್ ಜತೆ ಫ್ರೀಡಾ ಕೈ ಜೋಡಿಸಿದ್ದು, ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯೂಡಬ್ಲ್ಯೂಎಫ್) ಜತೆಗೆ ಡಿಸ್ಕವರಿ ಚಾನೆಲ್ ಸಹಯೋಗ ಹೊಂದಿದೆ. ಮುಂದಿನ ಐದು ವರ್ಷದೊಳಗೆ ಹುಲಿ ಸಂಖ್ಯೆಯನ್ನು ದ್ವಿಗುಣಗೊಳಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಭಾರತ ಮತ್ತು ಭೂತಾನ್ ಗಡಿಯಲ್ಲಿ ಹತ್ತಾರು ಲಕ್ಷ ಎಕರೆ ರಕ್ಷಿತ ಪ್ರದೇಶಗಳನ್ನು ರಕ್ಷಿಸಿಕೊಳ್ಳುವ ಉದ್ದೇಶ ಇದೆ. ಆ ಮೂಲಕ ಆರೋಗ್ಯಯುತ ಹುಲಿ ಆವಾಸ ಸ್ಥಾನದ ರಕ್ಷಣೆಯ ಗುರಿಯನ್ನು ಹೊಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಫ್ರೀಡಾ ಪಿಂಟೋ, ವಿಶ್ವದ ಹುಲಿ ಸಂತತಿಯನ್ನು ದ್ವಿಗುಣಗೊಳಿಸಬೇಕು ಅನ್ನೋದು ಡಿಸ್ಕವರಿ ಚಾನೆಲ್ ನವರ ಅಭಿಯಾನದ ಉದ್ದೇಶ. ಅವರ ಶ್ರಮದ ಜತೆಗೆ ನಾನಿದ್ದೇನೆ. ಭವಿಷ್ಯದ ಪೀಳಿಗೆ ಸ್ವಾಭಾವಿಕ ಆವಾಸ ಸ್ಥಾನದಲ್ಲಿ ಹುಲಿಗಳನ್ನು ನೋಡಲು ಸಾಧ್ಯವಿಲ್ಲ ಅನ್ನೋದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಇಂಥದ್ದೊಂದು ಪ್ರಾಣಿ ಇತ್ತು ಅನ್ನೋದನ್ನು ಚಿತ್ರಗಳಲ್ಲಿ ನೋಡುವ ಸ್ಥಿತಿ ಬಾರದಿರಲಿ ಎಂದಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: