ಕ್ರೀಡೆಮೈಸೂರು

ಇಂಟರ್ ಕ್ಲಬ್ ಯು-12 ಕ್ರಿಕೆಟ್ ಪಂದ್ಯಾವಳಿ: ವಿಜಯ ಸಾಧಿಸಿದ ಟೆರೆಶಿಯನ್

ಇಂಟರ್ ಕ್ಲಬ್ ಯು-12 ಕ್ರಿಕೆಟ್ ಪಂದ್ಯಾವಳಿಯ ರೋಚಕ ಕೊನೆಯ ಕದನದಲ್ಲಿ ಆತಿಥೇಯ ಟೆರೆಶಿಯನ್ ಕ್ರಿಕೆಟ್ ಅಕಾಡಮಿ ಮೈಸೂರು, ಕರ್ನಾಟಕ ಇನ್ಸಟಿಟ್ಯೂಟ್ ಆಫ್ ಕ್ರಿಕೆಟ್ ನ್ನು ಮಣಿಸಿ ವಿಜಯ ಸಾಧಿಸಿದೆ.

ಪ್ರಥಮವಾಗಿ ಬ್ಯಾಟಿಂಗ್ ಆರಂಭಿಸಿದ ಟೆರೆಶಿಯನ್ 24.5 ಓವರುಗಳಲ್ಲಿ 144ಕ್ಕೆ 9ವಿಕೆಟ್ ಪಡೆಯಿತು. ಬಳಿಕ ಬಂದ ಕರ್ನಾಟಕ ಇನ್ಸಟಿಟ್ಯೂಟ್ ಆಫ್ ಕ್ರಿಕೆಟ್ 25 ಓವರುಗಳಲ್ಲಿ 143ಕ್ಕೆ 7ವಿಕೆಟ್ ಗಳನ್ನು ಪಡೆದು ರನ್ನರ್ ಅಪ್ ಆಗಿ ಹೊರ ಹೊಮ್ಮಿತು.

ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ವಲಯ ಸಂಯೋಜಕ, ಮೈಸೂರು ವಲಯದ ಬಾಲಚಂದ್ರ ಎಸ್ ಉದ್ಘಾಟಿಸಿದರು.  ಮುಖ್ಯ ಅತಿಥಿಗಳಾಗಿ ಡಿಸಿಪಿ ಡಾ.ಹೆಚ್.ಟಿ.ಶೇಖರ್ ಪಾಲ್ಗೊಂಡಿದ್ದರು.

ಟೆರೆಶಿಯನ್ ಸಂಸ್ಥೆಯ ನಿರ್ದೇಶಕ ಸಜಿತಾ, ಮೈಸೂರು ವಿವಿ ಕ್ರಿಕೆಟ್ ತರಬೇತುದಾರ ಡಾ.ಮನ್ಸೂರ್ ಅಹ್ಮದ್, ಟೆರೆಶಿಯನ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಅಂಥೋನಿ ಮೊಸೆಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: