ಮನರಂಜನೆ

ನಿರ್ದೇಶನ ಕಾಯ್ಕಿಣಿ ಅವರ ದೊಡ್ಡ ಕನಸು

ಬೆಂಗಳೂರು,ಜು.29-ತಮ್ಮ ಅದ್ಭುತ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆಗಳಿಸಿರುವ ಜಯಂತ್ ಕಾಯ್ಕಿಣಿ ಅವರಿಗೆ ಸಿನಿಮಾ ನಿರ್ದೇಶನ ಮಾಡುವ ಕನಸಿದೆಯಂತೆ.

ಹೌದು, ಈ ಬಗ್ಗೆ ಸ್ವತಃ ಜಯಂತ್ ಕಾಯ್ಕಿಣಿ ಅವರೇ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಿರ್ದೇಶನ ಮಾಡುವುದು ನನ್ನ ದೊಡ್ಡ ಕನಸು. ಹೀಗಾಗಿ ನನ್ನ ಕಥೆಗಳು ಸಿನಿಮಾದ ರೀತಿ ಇರುತ್ತದೆ. ನನ್ನೊಳಗೆ ಒಬ್ಬ ನಿರ್ದೇಶಕ ಇದ್ದಾನೆ ಎಂದು ಹೇಳಿಕೊಂಡಿದ್ದಾರೆ. ಕಾಯ್ಕಿಣಿ ಅವರು ಯಾವಾಗ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲವಂತೆ. ಕಾಯ್ಕಿಣಿ ಅವರ ಹಾಡುಗಳು ಎಲ್ಲರಿಗೂ ಇಷ್ಟವಾಗಿರುವಂತೆ ಜಯಂತ್ ಅವರ ನಿರ್ದೇಶನ ಎಲ್ಲರಿಗೂ ಇಷ್ಟವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. (ವರದಿ-ಎಂ.ಎನ್)

Leave a Reply

comments

Related Articles

error: