ದೇಶಪ್ರಮುಖ ಸುದ್ದಿ

ಆದಾಯ ತೆರಿಗೆ ಸಲ್ಲಿಕೆ ಗಡುವು ವಿಸ್ತರಣೆಗೆ ಚಿಂತನೆ: ಅಧಿಕಾರಿಗಳೊಂದಿಗೆ ಅರುಣ್ ಜೇಟ್ಲಿ ಚರ್ಚೆ

ನವದೆಹಲಿ, ಜುಲೈ 29 : ಈ ಸಾಲಿನ ಆದಾಯ ತೆರಿಗೆ ಸಲ್ಲಿಕೆಗೆ ಇದ್ದ ಕಾಲಮಿತಿಯನ್ನು ವಿಸ್ತರಿಸುವ ಕುರಿತು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ತಿಳಿದುಬಂದಿದ್ದು, ಈ ತಿಂಗಳಾಂತ್ಯ 31ಕ್ಕೆ ಆದಾಯ ತೆರಿಗೆ ಸಲ್ಲಿಕೆಗೆ ಇರುವ ಗಡುವು ಮುಕ್ತಾಯವಾಗಲಿದೆ. ಆದರೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಆದಾಯ ತೆರಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ನೋಟು ನಿಷೇಧ, ಆಧಾರ್-ಪ್ಯಾನ್ ಜೋಡಣೆ ಮತ್ತು ಜಿಎಸ್‍ಟಿ ಜಾರಿಯಿಂದಾಗಿ ಈ ವರ್ಷ ಜನರು ಆದಾಯ ತೆರಿಗೆ ಪಾವತಿ ಸಂದರ್ಭ ಹಲವಾರು ಹೊಸ ಸವಾಲುಗಳನ್ನು ಎದುರಿದ್ದಾರೆ. ಈ ಎಲ್ಲ ಕಾರಣಗಳಿಂದ ಬಹುಶಃ ಆದಾಯ ತೆರಿಗೆ ಸಲ್ಲಿಕೆಗೆ ತೊಡಕಾಗಿ ಪರಿಣಮಿಸಿರಬಹುದು ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದು, ಅವಧಿ ವಿಸ್ತರಣೆಯಿಂದ ಮತ್ತಷ್ಟು ತೆರಿಗೆ ಸಂಗ್ರಹಿಸಲು ಸಹಕಾರಿಯಾಗಲಿದೆ ಎಂದೂ ಹೇಳಿದ್ದಾರೆ.

ಇದರಂತೆ ಜುಲೈ 31ರ ಗಡುವನ್ನು ಇನ್ನೂ ಒಂದು ತಿಂಗಳಿಗೆ ವಿಸ್ತರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆಯಲ್ಲಿ ತೊಡಗಿದ್ದು, ಈ ಬಗ್ಗೆ ವಿತ್ತ ಇಲಾಖೆಯ ಅಧಿಕಾರಿಗಳೊಂದಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಚರ್ಚೆ ನಡೆಸಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಆದೇಶ ಹೊರಡಿಸಬಹುದು ಎಂದು ಹೇಳಲಾಗುತ್ತಿದೆ.

-ಎನ್.ಬಿ.

Leave a Reply

comments

Related Articles

error: