ಮೈಸೂರು

ಮನ್ನಾರ್ಸ್‍ ಮಾರ್ಕೆಟ್‍ಗೆ ದಾಳಿ: ಎರಡು ಲಾರಿ ಪ್ಲಾಸ್ಟಿಕ್ ವಶ

ಮೈಸೂರಿನಲ್ಲಿರುವ ಮನ್ನಾರ್ಸ್‍ ಮಾರ್ಕೆಟ್‍ಗೆ ದಾಳಿ ನಡೆಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಎರಡು ಲಾರಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.

ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು ಹಾಗೂ ಸಹಾಯಕ ಆಯುಕ್ತ ಸತ್ಯಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಮೈಸೂರಿನಲ್ಲಿ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಿದ್ದರೂ ಕೂಡ ಕೆಲ ಮಳಿಗೆ ಹಾಗೂ ಅಂಗಡಿ ಮಾಲೀಕರು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೆ ದಾಳಿ ನಡೆಸಿ ಅಕ್ರಮವಾಗಿ ಪ್ಲಾಸ್ಟಿಕ್ ಸಾಗಣೆ ಮಾಡುತ್ತಿದ್ದ ಕೆಲ ಅಂಗಡಿ ಮೇಲೆ ಈ ರೈಡ್ ಮಾಡಲಾಗಿದೆ ಎಂದು ‘ಸಿಟಿ ಟುಡೇ’ಗೆ ಆರೋಗ್ಯಾಧಿಕಾರಿ ಡಾ.ನಾಗರಾಜು ಅವರು ತಿಳಿಸಿದ್ದಾರೆ.

 

Leave a Reply

comments

Related Articles

error: