ಮೈಸೂರು

ಸಾಫ್ಟ್ ಬಾಲ್ ಟೂರ್ನಮೆಂಟ್: ಎಟಿಎಂಇ ಕಾಲೇಜು ಪ್ರಥಮ

ಮೈಸೂರು ನಗರ ಅಂತರ್‍-ಕಾಲೇಜು ಸಾಫ್ಟ್ ಬಾಲ್ 2016-17ರಲ್ಲಿ ಎಟಿಎಂಇ ಕಾಲೇಜು ಅದ್ಭುತ ಆಟ ಆಡಿ ಮೂರನೇ ಬಾರಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು ಈ ಟೂರ್ನಮೆಂಟ್‍ ಅನ್ನು ಇತ್ತೀಚಿಗೆ ಆಯೋಜಿಸಿತ್ತು. ಎಟಿಎಂಇ ಮತ್ತು ಎನ್‍ಐಇಐಟಿ ಕಾಲೇಜು ತಂಡಗಳ ಮಧ್ಯೆ ಅಂತಿಮ ಪಂದ್ಯ ನಡೆಯಿತು. 21-6 ರನ್‍ಗಳಿಂದ ಎಟಿಎಂಇ ಕಾಲೇಜು ಗೆಲುವು ಸಾಧಿಸಿತು.

ಚಿತ್ರದಲ್ಲಿ: ಎಟಿಎಂಇ ಕಾಲೇಜಿನ ಪ್ರಾಂಶುಪಾಲ ಡಾ.ಎಲ್. ಬಸವರಾಜ್, ದೈಹಿಕ ಶಿಕ್ಷಕ ಎಂ.ಪಿ. ಮುರಳೀಧರ್ ಮತ್ತು ವಿದ್ಯಾರ್ಥಿಗಳಾದ ಸಚಿನ್, ಅಕ್ಷಯ್, ಮನೋಜ್, ಗೌತಮ್, ವಿಶಾಲ್, ಕಾರ್ತಿಕ್, ಸ್ವಾಗತ್, ನಿತಿನ್, ಪ್ರಶಾಂತ್, ಸಚಿನ್, ಸುಶಾಂತ್, ಪವನ್, ಪ್ರಮಥ್, ವೇದಿತ್, ಪ್ರಫುಲ್(ನಾಯಕ), ಪವನ್ ಮತ್ತು ವಿನಯ್ ಇದ್ದಾರೆ.

Leave a Reply

comments

Related Articles

error: