ಮೈಸೂರು

ಮಹಾರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ.5 ಮತ್ತು 6 ರಂದು ಉದ್ಯೋಗ ಮೇಳ

ಮೈಸೂರು, ಜು.29: ಮಹಾರಾಜ ಶಿಕ್ಷಣ ಸಂಸ್ಥೆಯಿಂದ ಆಗಸ್ಟ್ 5 ಮತ್ತು 6 ರಂದು ಉದ್ಯೋಗ ಮೇಳವನ್ನು ಮಹಾರಾಜ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಮುರುಳಿ ಹೇಳಿದರು.

ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉದ್ಯೋಗ ಮೇಳವು ಎಲ್ಲಾ ಡಿಪ್ಲೋಮಾ, ಪದವೀಧರರು ಹಾಗೂ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಉದ್ಯೋಗಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಈ ಉದ್ಯೋಗ ಮೇಳವನ್ನು ಸಾಮಾಜಿಕ ಹಿತದೃಷ್ಠಿಯಿಂದ ಆಯೋಜಿಸಲಾಗಿದ್ದು, ಭಾಗವಹಿಸುವ ಉದ್ಯೋಗಾಂಕ್ಷಿಗಳು ಯಾವುದೇ ರೀತಿಯ ಮುಂಗಡ ಶುಲ್ಕವಾಗಲಿ ಹಾಗೂ ಇತರೆ ಶುಲ್ಕವನ್ನು ಪಾವತಿಸುವಂತಿಲ್ಲ. ಮೈಸೂರು ನಗರದ ವಿವೊಧ ಭಾಗಗಳಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಬಯೋಡೇಟಾದ ಸುಮಾರು 10 ಪ್ರತಿಗಳನ್ನು ತರಬೇಕು. ಕರ್ನಾಟಕ ಸ್ಥಳೀಯ ಉದ್ಯೋಗಾಂಕ್ಷಿಗಳಿಗೆ ಮಾತ್ರ ಅವಕಾಶ ಇರುತ್ತದೆ. ಸುಮಾರು 200 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.

ಮೊ.ನಂ. 7835844440 ಗೆ ಮಿಸ್ಡ್ ಕಾಲ್ ಕೊಟ್ಟು ಹೆಸರು ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ಲೇಸ್ ಮೆಂಟ್ ಆಫೀಸರ್ ಹರ್ಷಿತ್ ದಿವಾಕರ್, ಶಿವಸಾಗರ್ ಹಾಜರಿದ್ದರು. (ವರದಿ: ಎಲ್.ಜಿ)

 

Leave a Reply

comments

Related Articles

error: