ಮೈಸೂರು

ದ್ವಿಚಕ್ರ ವಾಹನ ಕಳ್ಳರ ಬಂಧನ : 1.34 ಲಕ್ಷ ರೂ. ಮೌಲ್ಯದ 4 ದ್ವಿಚಕ್ರ ವಾಹನಗಳ ವಶ

ಮೈಸೂರು, ಜುಲೈ 29 : ಸರಸ್ವತಿಪುರಂ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದು, ಅವರಿಂದ 1.34 ಲಕ್ಷ ರೂ ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ 27ರಂದು ತೊಣಚಿಕೊಪ್ಪಲಿನ ಕಾಮಧೇನು ಸರ್ಕಲ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ನಂಬರ್ ಪ್ಲೇಟ್ ಇಲ್ಲದೇ ಹೊಂಡಾ ಆಕ್ಟಿವಾ ಸ್ಕೂಟರನ್ನು ಓಡಿಸಿಕೊಂಡು ಅನುಮಾನಾಸ್ಪದವಾಗಿ ಬರುತ್ತಿದ್ದ ನಾರಾಯಣ @ ಕಡ್ಡಿಪುಡಿ ನಾರಾಯಣ (23 ವರ್ಷ) ಮತ್ತು ರವಿ @ ವಾಲೆ ರವಿ (28 ವರ್ಷ) ಎಂಬುವವರುಗಳನ್ನು ಸ್ಕೂಟರ್ ಸಮೇತ ವಶಕ್ಕೆ ಪಡೆದು ವಿಚಾರ ಮಾಡಿದಾಗ ಇವರು ಸರಸ್ವತಿಪುರಂ, ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ನಂಜನಗೂಡಿನಲ್ಲಿ ಒಟ್ಟು 04 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದ ಕಾರಣ ಆರೋಪಿಗಳಿಂದ 1.34 ಲಕ್ಷ ರೂ. ಮೌಲ್ಯದ 04 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

1-ಹೊಂಡಾ ಆಕ್ಟಿವಾ, 1-ಯಮಹ ಆರ್.ಎಕ್ಸ್, 1 ಹಿರೋ ಹೊಂಡಾ ಸ್ಪ್ಲೆಂಡರ್+, 1-ಹಿರೋ ಹೊಂಡಾ ಪ್ಯಾಷನ್ ಪ್ಲಸ್ ಸೇರಿ ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಆರೋಪಿಗಳು ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿರುವ ವಾಹನಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿ ನಾರಾಯಣ @ ಕಡ್ಡಿಪುಡಿ ನಾರಾಯಣನ ಮೇಲೆ ಈ ಹಿಂದೆ ಸಹ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.

ಸರಸ್ವತಿಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀ ಎನ್.ಸಿ.ನಾಗೇಗೌಡ , ಪಿಎಸ್‍ಐ ಎನ್.ಮೋಹನ್, ಎ.ಎಸ್.ಐ. ಬಿ.ಎನ್. ಲಿಂಗರಾಜು, ಸಿಬ್ಬಂದಿಯವರಾದ ಬಸವರಾಜೆ ಅರಸ್, ಕಾಂತರಾಜು, ಹೆಚ್.ವಿ.ಮಂಜುನಾಥ, ರಾಮಯ್ಯ, ನಾಗೇಶ ಹರೀಶ್ ಆಚಾರ್ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

-ಎನ್.ಬಿ.

Leave a Reply

comments

Related Articles

error: