ಮೈಸೂರು

ಶಿಶುಗೀತೆ ಸಮೂಹ ಗಾಯನ ಸ್ಪರ್ಧೆ

ಕೆನರಾ ಬ್ಯಾಂಕ್ ಸಂಸ್ಥಾಪಕ ದಿನಾಚರಣೆಯಂಗವಾಗಿ ನಗರದ ಮನ್ವಂತರ ಸಮೂಹ ಬಳಗದಿಂದ “ಚಿಗುರು-ಗಾನ-ಯಾನ” ಎನ್ನುವ ಸಮೂಹ ಶಿಶುಗೀತೆ ಗಾಯನವನ್ನು ಆಯೋಜಿಸಲಾಗಿದ್ದು ಪುಟ್ಟ ಮಕ್ಕಳಲ್ಲಿ ಕನ್ನಡದ ಶಿಶುಗೀತೆ ಬಗ್ಗೆ ಆಸಕ್ತಿ ಮೂಡಿಸಲು ವಿನೂತನ ಕಾರ್ಯಕ್ರಮವಾಗಿದೆ ಎಂದು ಸಂಗೀತ ನಿರ್ದೇಶಕಿ ಜಿ.ಪುಷ್ಪಲತಾ ತಿಳಿಸಿದರು.

ಅವರು, ನಗರದ ಪತ್ರಕರ್ತರ ಭವನದಲ್ಲಿ ಇಂದು(ಅ.19) ಸುದ್ದಿಗೋಷ್ಠಿ ನಡೆಸಿ ನಗರದ ಮಹರ್ಷಿ ಶಾಲೆಯ ರಂಗಶಂಕರ ಮಂದಿರದಲ್ಲಿ ಆಯೋಜಿಸಿದ್ದು, ಎಲ್.ಕೆ.ಜಿಯಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ವರ್ಗಗಳಲ್ಲಿ ಸ್ಪರ್ಧೆಗಳು ಜರುಗಲಿದ್ದು ಎಲ್.ಕೆ.ಜಿಯಿಂದ 1ನೇ ತರಗತಿ ಹಾಗೂ ಎರಡನೇ ವರ್ಗದಲ್ಲಿ 4ನೇ ತರಗತಿಯವರೆಗೆ.  ಮೂರು ಸುತ್ತಿನಲ್ಲಿ ನಡೆಯುವ ಸ್ಪರ್ಧೆಯು ಮೊದಲನೆಯ ಸುತ್ತು ನವೆಂಬರ್ 13ರಂದು, ಎರಡನೇ ನ.20 ಹಾಗೂ ಅಂತಿಮ ಸುತ್ತಿನ ಕಾರ್ಯಕ್ರಮವು ನ.27ರಂದು ನಡೆಸಿ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಕನ್ನಡ ಶಿಶುಗೀತೆಯನ್ನು ಉತ್ತೇಜಿಸುವ ಉದ್ದೇಶದಿಂದ ಚಿಗುರು-ಗಾನ-ಯಾನದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು  ಮನ್ವಂತರ ಸಮೂಹ ಬಳಗದ ಸಲಹೆಗಾರ ಗಣೇಶ ರಾವ್ ಹೆಸರಾಂತ ಇತಿಹಾಸ ತಜ್ಞ ಈಚನೂರು ಕುಮಾರು ತೀರ್ಪುಗಾರರಾಗಿರುವರು. ಇಂಗ್ಲಿಷ್ ರೈಮ್ಸ್ ಗೆ ಮರೆ ಹೋಗಿರುವ ಪೋಷಕರು, ಮಕ್ಕಳಿಗೆ ಕನ್ನಡವನ್ನೇ ಮರೆಸುತ್ತಿದ್ದಾರೆ, ಶಿಶುಗೀತೆ ಸ್ಪರ್ಧೆಯನ್ನು ಆಯೋಜಿಸಿ ಮಕ್ಕಳಲ್ಲಿ ಕನ್ನಡದ ಪ್ರೀತಿ ಮೂಡಿಸಲು ಈ ವಿಶೇಷ ಪ್ರಯತ್ನ, ಕನ್ನಡದಲ್ಲಿಯೇ ಖ್ಯಾತ ಶಿಶುಗೀತೆಗಳಿವೆ. ಗೀತೆಯ ಸಾಹಿತ್ಯವನ್ನು ನೀಡಲಿದ್ದು ಶಿಕ್ಷಕರು ಅಥವಾ ಪೋಷಕರು ಅಭ್ಯಾಸಿಸಬೇಕು, ಕಾರ್ಯಕ್ರಮದ ಕೊನೆಯ ಹಂತದಲ್ಲಿ ಒಂದೇ ವೇದಿಕೆಯಲ್ಲಿ ಅರವತ್ತು ಮಕ್ಕಳು ಸಾಮೂಹಿಕವಾಗಿ ಶಿಶುಗೀತೆ ಪ್ರಸ್ತುತಪಡಿಸಲಿದ್ದು ಕೇಳುಗರಿಗೆ ಆನಂದ ನೀಡುವರು ಎಂದು ತಿಳಿಸಿದರು. ಹೆಸರು ನೋಂದಣಿಗೆ ನವೆಂಬರ್ 5 ಕೊನೆಯ ದಿನವಾಗಿದ್ದು 10 ರೂಪಾಯಿ ಶುಲ್ಕವಿದೆ.  ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9538522053 ಹಾಗೂ 9341955068 ಅನ್ನು ಸಂಪರ್ಕಿಸಬಹುದು.

ಕನ್ನಡ ಕಾದಂಬರಿ ಕಾಲೇಜಿನತ್ತ : ಮನ್ವಂತರ ಸಮೂಹ ಸಂಸ್ಥೆಯಿಂದ ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಹಿನ್ನಲೆಯಲ್ಲಿ ‘ಕನ್ನಡ ಕಾದಂಬರಿ ಕಾಲೇಜಿನತ್ತ’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿ ಸಾಹಿತ್ಯದೆಡೆಗೆ ವಿದ್ಯಾರ್ಥಿಗಳನ್ನು ಸೆಳೆಯಲು ಪ್ರಯತ್ನಿಸಲಾಗುವುದು. ಕಾರ್ಯಕ್ರಮಕ್ಕೆ ಅ.26ರಂದು ಮೈಸೂರಿನ ನಟರಾಜ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ಗಂಟೆಗೆ ಸಾಹಿತಿ ಲತಾ ರಾಜಶೇಖರ್ ಚಾಲನೆ ನೀಡುವರು. ಚಿದಾನಂದಸ್ವಾಮೀಜಿ ಸಾನಿದ್ಯ ವಹಿಸುವರು.  ಮೂರು ಹಂತಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಿದ್ದು ಮೊದಲ ಹಂತದಲ್ಲಿ ವಿದ್ಯಾರ್ಥಿಗಳೇ ಕಾದಂಬರಿ ಬಗ್ಗೆ, ಎರಡನೇ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾದಂಬರಿ ನೀಡಿ ಆ ಬಗ್ಗೆ ಮಾತನಾಡುವುದು ಅಂತಿಮ ಹಂತದಲ್ಲಿ ತೀರ್ಪುಗಾರರು ನೀಡುವ ಕಾದಂಬರಿ ಆಧಾರಿತ ಬಗ್ಗೆ ಮೂರು ನಿಮಿಷಗಳ ಕಾಲ ಮಾತನಾಡಬೇಕು. ಸ್ಪರ್ದೆಗಾಗಿ ಕೇವಲ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳನ್ನೇ ಹಾಗೂ ಮಹಿಳಾ ಸಾಹಿತಿಗಳ ಕಾದಂಬರಿಗಳನ್ನೇ ಆಯ್ಕೆ ಮಾಡಿರುವುದು ವಿಶೇಷ ಎಂದು ಮನ್ವಂತರ ಸಮೂಹ ಬಳಗದ ಗೌರವ ಕಾರ್ಯದರ್ಶಿ ನಾ.ಮಹಾವೀರ್ ಪ್ರಸಾದ್ ತಿಳಿಸಿ ವಿದ್ಯಾರ್ಥಿಗಳು ಟಿವಿ, ಮೊಬೈಲ್, ಕಂಪ್ಯೂಟರ್ ನಿಂದ ಸಾಹಿತ್ಯ ಓದುವ ಹವ್ಯಾಸವನ್ನೇ ಬಿಟ್ಟಿದ್ದು ಅವರಲ್ಲಿ ಆಸಕ್ತಿ ತುಂಬಿ ಪ್ರೋತ್ಸಾಹ ನೀಡಲು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಕನ್ನಡ ಕಾದಂಬರಿ ಮೇಳವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ  ಬಳಗದ ಸಂಸ್ಥಾಪಕ ಅಧ್ಯಕ್ಷ ವೆಂಕಟರಾಂ ಕಶ್ಯಪ್, ಸಲಹೆಗಾರ ಗಣೇಶ್ ರಾವ್, ಉಪಾಧ್ಯಕ್ಷ ಜೆ.ರಮೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: