ಮೈಸೂರು

ಇತ್ತೀಚಿನ ದಿನಗಳಲ್ಲಿ ಸಿದ್ಧಾಂತಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯ: ಡಾ.ಎಸ್.ಆರ್. ಪಾಂಡ್ಯನ್

ಭಾರತದ ಶಾಲೆ ಮತ್ತು ಕಾಲೇಜು ಶಿಕ್ಷಣವು ಬಹುತೇಕ ಪುಸ್ತಕ ಮತ್ತು ಬೋಧನೆ ಆಧಾರಿತವಾಗಿದೆ ಎಂದು ಡಾ.ಎಸ್.ಆರ್. ಪಾಂಡ್ಯನ್ ಹೇಳಿದರು.

ಮಾನಸಗಂಗೋತ್ರಿಯಲ್ಲಿ ಬುಧವಾರದಂದು ನಡೆದ 3ನೇ ಅಂತಾರಾಷ್ಟ್ರೀಯ ಸ್ಟೆಮ್ ಕಾರ್ಯಕ್ರಮದ ಅಂಗವಾಗಿ ‘ನವೀನ ಮಾದರಿಯ ಸ್ಟೆಮ್‍ ಶಿಕ್ಷಣಕ್ಕೆ ಅಗ್ಗ ರೋಬೋಟ್‍ಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಭಾರತದಲ್ಲಿ ಶಿಕ್ಷಣ ಪದ್ಧತಿಯೂ ಪರೀಕ್ಷಾ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ಪಡೆದರೂ ಎಂದರೆ ಕಾಲೇಜಿನ ಘನತೆಗೆ ಕುಂದು ಬರುತ್ತದೆ. ರೋಬೋಟಿಕ್ ಮತ್ತು ಸ್ಟೆಮ್ ಶಿಕ್ಷಣವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಜ್ಞಾನ ನೀಡುವುದಲ್ಲದೇ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನವೀನ ಮಾದರಿಯ ಮಾದರಿಗಳನ್ನು ತಯಾರಿಸಲು ಸಹಕಾರಿಯಾಗಿದೆ ಎಂದರು.

ಪ್ರಸ್ತುತ ಭಾರತ ಸರಕಾರವು ಮೇಕ್‍ ಇನ್‍ ಇಂಡಿಯಾ, ಸ್ಟಾರ್ಟ್‍ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ಸ್ ಇಂಡಿಯಾದಂತಹ ಹಲವು ಯೋಜನೆಗಳನ್ನು ಆರಂಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಲ್ನಾಡ್ ಕಾಲೇಜ್‍ ಆಫ್ ಇಂಜಿನಿಯರಿಂಗ್ ಪ್ರೊಫೆಸರ್ ಡಾ.ಮೋಹನ್ ಕುಮಾರ್ ಅವರು ‘ಮನುಷ್ಯರಿಗಾಗಿ ಆಧುನಿಕ ರೋಬೋಟ್‍ಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು.

Leave a Reply

comments

Related Articles

error: