ಮೈಸೂರು

ರಂಗವಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಅ.21ರಿಂದ

ಮೈಸೂರಿನ ರಂಗವಲ್ಲಿ ಹವ್ಯಾಸಿ ರಂಗತಂಡದ ದಶಮಾನೋತ್ಸವದ ಅಂಗವಾಗಿ ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ರವಿಪ್ರಸಾದ್ ತಿಳಿಸಿದರು.

ಅವರು, ನಗರದಲ್ಲಿಂದು (ಅ.19) ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅ.21 ರಿಂದ 23ರವರೆಗೆ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನಡೆಯುವ ನಾಟಕೋತ್ಸವಕ್ಕೆ ಅ.21ರ ಬೆಳಿಗ್ಗೆ 10:30ಕ್ಕೆ ಹಿರಿಯ ರಂಗ ನಿರ್ದೇಶಕ ಪ್ರಸನ್ನ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ರಂಗಕರ್ಮಿ ನ.ರತ್ನ, ರಂಗಾಯಣದ ನಿರ್ಮಲ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಎಂ.ರಾಮಚಂದ್ರ, ವಿಜಯವಿಠ್ಠಲ ವಿದ್ಯಾಸಂಸ್ಥೆ ಕಾರ್ಯದರ್ಶಿ ವಾಸುದೇವಭಟ್ ಉಪಸ್ಥಿತರಿರುವರು.

ಸಂಜೆ 4:30ಕ್ಕೆ ಮೈಸೂರು ಮೈಮ್ ತಂಡದಿಂದ ಪ್ರಾತ್ಯಕ್ಷಿಕೆ, ಚೆಂಡೆಮೇಳ ಕಲಾಸಂಘದಿಂದ ವಿಶೇಷ ಚಂಡೆಮೇಳ ಹಾಗೂ ಹುಲಿವೇಷ ಕುಣಿತ ಮತ್ತು ಸಂಜೆ 7ಕ್ಕೆ ಬಿ.ಆರ್.ವೆಂಕಟರಮಣ ಐತಾಳ್ ನಿರ್ದೇಶನದ ಕಾಲಂದುಗೆಯ ಕಥೆ ನಾಟಕ.

ಅ.22ರಂದು ‘ರಿದಂ ಅಡ್ಡ’ ತಂಡದಿಂದ ವಾದ್ಯ ಜುಗಲ್ ಬಂದಿ ಸಂಜೆ 7ಕ್ಕೆ  ಹೈಸ್ನಾಮ್ ತೊಂಬಾ ರಚನೆ ವಿನ್ಯಾಸ ಹಾಗೂ ನಿರ್ದೇಶನದ ಅತ್ತದರಿ ಇತ್ತ ಪುಲಿ ಅ.23ರ ಭಾನುವಾರದಂದು ಸಂಜೆ ಪಂಡಿತ್ ಕಿಶೋರ್ ರಮೇಶ್ ಅವರಿಂದ ಹಿಂದೂಸ್ತಾನಿ ಗಾಯನ ಸಂಜೆ 7ಕ್ಕೆ ಶರಣ್ಯಾ ರಾಮಪ್ರಕಾಶ್ ರಚನೆ -ನಿರ್ದೇಶನದ ‘ಅಕ್ಷಯಾಂಬರ’ ನಾಟಕ ಪ್ರದರ್ಶನಗೊಳಲಿದ್ದು ಪ್ರತಿ ಟಿಕೆಟ್ ಗೆ 50 ರೂಪಾಯಿ ನಿಗದಿಪಡಿಸಲಾಗಿದೆ, ನಾಟಕೋತ್ಸವದ ನಿಮಿತ್ಯ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಬಿ.ರಾಜೇಶ್, ಶಿವಮೂರ್ತಿ, ಮಂಜುನಾಥ್ ಶಾಸ್ತ್ರಿ ಹಾಗೂ ರಾಜಲಕ್ಷ್ಮಿ ಉಪಸ್ಥಿತರಿದ್ದರು.

Leave a Reply

comments

Related Articles

error: