ಮೈಸೂರು

‘ವಿಜ್ಞಾನ ರೋಟರಿ’ ಪ್ರೌಢಶಾಲಾ ಮಕ್ಕಳಿಗೆ ವಿಶೇಷ ಕಾರ್ಯಕ್ರಮ

ಮಕ್ಕಳಲ್ಲಿ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಮೂಡಿಸಲು  ಮೈಸೂರು ಜಿಲ್ಲಾ ಪ್ರೌಢಶಾಲಾ ಮಕ್ಕಳಿಗಾಗಿ ‘ವಿಜ್ಞಾನ ರೋಟರಿ’ ವಿಜ್ಞಾನದ ವಿಶೇಷ ಪ್ರಯೋಗಾಧರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿದೆ ಎಂದು ರೋಟರಿ ಮೈಸೂರು ಬೃಂದಾವನ ಅಧ್ಯಕ್ಷ ಕ.ಸು.ರಾಘವೇಂದ್ರ ತಿಳಿಸಿದರು.

ಅವರು, ನಗರದ ಪತ್ರಕರ್ತರ ಭವನದಲ್ಲಿ ಇಂದು(ಅ.19) ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಸ್ಥೆಯ ವತಿಯಿಂದ ಪ್ರತಿವರ್ಷವೂ ವಿಜ್ಞಾನ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು ಈಗಾಗಲೇ ಶಾಲೆಗಳಿಗೆ ಪತ್ರಗಳನ್ನು ನೀಡಲಾಗಿದ್ದು ಆಯ್ಕೆಯಾದವರಿಗೆ ನವೆಂಬರ್ 25 ರಿಂದ 27ರವರೆಗೆ ರೋಟರಿ ಮೈಸೂರು ಬೃಂದಾವನ ಶಾಲಾ ಮೈದಾನದಲ್ಲಿ ನಡೆಯಲಿರುವ ವಿಜ್ಞಾನ ಮೇಳದಲ್ಲಿ ಪ್ರದರ್ಶಿಸಲು ಅವಕಾಶವನ್ನು ನೀಡಲಾಗುವುದು. ವಿಜ್ಞಾನ ರೋಟರಿ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಇಪ್ಪತ್ತು, ಹದಿನೈದು ಹಾಗೂ ಹತ್ತು ಸಾವಿರ ರೂಪಾಯಿಗಳ ನಗದು ಹಾಗೂ ಐದು ಸಾವಿರ ರೂಪಾಯಿಯ ಎರಡು ಸಮಾಧಾನಕರ ಬಹುಮಾನ ವಿತರಿಸಲಾಗುವುದು ಎಂದರು. ನವೆಂಬರ್ 3 ಮಾದರಿ ಕೈ ಸೇರಲು ಕೊನೆಯ ದಿನವಾಗಿದೆ, ಮೇಳದಲ್ಲಿ ವಿದ್ಯಾರ್ಥಿಗಳಿಗೆ 10X10 ಸ್ಥಳವನ್ನು ಪ್ರದರ್ಶನಕ್ಕಾಗಿ ನೀಡಲಾಗುವುದು. ಪ್ರವೇಶ ಶುಲ್ಕ ಇನ್ನೂರು ರೂಪಾಯಿ ಆಗಿದೆ. ಈ ಹಿಂದೆ ಪ್ರದರ್ಶನದಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿಯೇ ಕೀರ್ತಿ ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದ್ಲಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಪೊಲೀಯೋ ನಿರ್ಮೂಲನೆಯಲ್ಲಿ ರೋಟರಿಯೂ ಕೈಜೋಡಿ ಯಶಸ್ವಿಯಾಗಿದ್ದು ಪ್ರಸಕ್ತ ಸಾಲಿನಲ್ಲಿ ಸಾಕ್ಷರತಾ ಆಂದೋಲನವನ್ನು ಹಮ್ಮಿಕೊಂಡು ಶಾಲೆಗಳಿಗೆ ಪ್ರಾಥಮಿಕ ಮೂಲಸೌಲಭ್ಯಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಮೈಸೂರು ತಾಲೂಕಿನ ನಾಗನಹಳ್ಳಿ ಕಲ್ಲೂರು ಗ್ರಾಮವನ್ನು ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀಪ್ರಕಾಶ್ ಹನ್ಸೋಗಿ ,ಧರ್ಮಾನಂದ್, ರಾಮಮೂರ್ತಿ ಹಾಗೂ ಶ್ರೀಮತಿ ರಾಮಮೂರ್ತಿ ಉಪಸ್ಥಿತರಿದ್ದರು.

Leave a Reply

comments

Related Articles

error: