
ಮೈಸೂರು
ವೇಶ್ಯಾವಟಿಕೆ ದಂಧೆಯಲ್ಲಿ ತೊಡಗಿದ್ದ ಐವರ ಬಂಧನ
ಮೈಸೂರು,ಜು.30:- ವೇಶ್ಯಾವಟಿಕೆ ದಂಧೆಯಲ್ಲಿ ತೊಡಗಿದ್ದ ಐವರನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಇಬ್ಬರು ಯುವಕರು, ಓರ್ವ ಯುವತಿ ಸೇರಿದಂತೆ ಬಾಂಗ್ಲಾದೇಶದ ಇಬ್ಬರು ಯುವತಿಯರನ್ನು ಬಂಧಿಸಲಾಗಿದೆ. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಶಂಕರ ಬಡಾವಣೆಯ ಮನೆಯೊಂದರಲ್ಲಿ ವೇಶ್ಯಾವಟಿಕೆ ದಂಧೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಪಿಂಪ್ ಗಳಾದ ಮಮುದ ಅಕ್ತರ್, ರುಕ್ಸಾನಾ ಶೇಖ್ ಹಾಗೂ ಸುಧಾಕರ್ ಮತ್ತು ಗಿರಾಕಿ ಶ್ರೇಯಸ್, ಈಟಿ ಇಕ್ಬಾಲ್ ಶೇಖ್ ನ್ನು ಬಂಧಿಸಿದ್ದಾರೆ. ಮಮುದ ಅಕ್ತರ್ ಹಾಗೂ ರುಕ್ಸಾನಾ ಶೇಖ್ ಬಾಂಗ್ಲಾದೇಶದ ನಿವಾಸಿಗಳಾಗಿದ್ದು, ವಿಚಾರಣೆ ವೇಳೆ ಇಬ್ಬರೂ ಅಕ್ರಮವಾಗಿ ಭಾರತಕ್ಕೆ ನುಸುಳಿರುವ ವಿಚಾರ ಬೆಳಕಿಗೆ ಬಂದಿದೆ. ಈಟಿ ಇಕ್ಬಾಲ್ ಶೇಖ್ ನ್ನು ಒಡನಾಡಿ ಸಂಸ್ಥೆಯ ಆಶ್ರಯಕ್ಕೆ ನೀಡಲಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಕೆ.ಎಸ್,ಎಸ್.ಎಚ್)