ಮನರಂಜನೆ

ಕಿಚ್ಚನ ಟ್ವಿಟ್ ಗೆ ಥ್ಯಾಂಕ್ಸ್ ಹೇಳಿದ ನಟ ಧನುಷ್

ಚೆನೈ,ಜುಲೈ.31: ಉತ್ತಮ  ಸ್ನೇಹಕ್ಕೆ ಭಾಷೆ ಯಾವತ್ತು ಅಡ್ಡಿಯಾಗುವುದಿಲ್ಲ. ಸ್ಯಾಂಡಲ್‍ ವುಡ್‍ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ತಮಿಳು ನಟ ಧನುಷ್ ಒಳ್ಳೆಯ ಸ್ನೇಹಿತರು. ಭಾಷೆ ಬೇರೆಯಾದರೂ ನಟನೆಯ ವಿಚಾರದಲ್ಲಿ ಪರಸ್ಪರ ಅಭಿನಂದಿಸುತ್ತಾರೆ. ಇನ್ನು ಮುಂದೆ ಅವಕಾಶ ಸಿಕ್ಕಿದರೆ ಇಬ್ಬರು ಸೇರಿ ಸಿನಿಮಾ ಮಾಡುವ ಸಾಧ್ಯತೆ ಕೂಡಾ ಇದೆ. ಒಟ್ಟಿಗೆ ಸಿನಿಮಾ ಮಾಡುವ ವಿಚಾರವನ್ನು  ನಟ ಧನುಷ್‍ ಹಾಗೂ ಸುದೀಪ್ ಅನೇಕ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ಜುಲೈ 28 ರಂದು ನಟ ಧನುಷ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸುದೀಪ್ ತಮ್ಮ ಟ್ವಿಟ್ಟರ್ ನ ಮೂಲಕ ತಮ್ಮ ಗೆಳೆಯ ಧನುಷ್ ಗೆ ಜನುಮದಿನದ ಶುಭಾಶಯ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಧನುಶ್ ಕಿಚ್ಚನಿಗೆ ‘ಥ್ಯಾಂಕ್ಸ್’ ಹೇಳಿದ್ದಾರೆ. ( ವರದಿ: ಪಿ.ಜೆ )

Leave a Reply

comments

Related Articles

error: