ಮೈಸೂರು

ಹೆಂಡತಿ ನೋಡಲು ಬಂದ ಗಂಡ ಹೆಣವಾದ..!

ನಂಜನಗೂಡು,ಆ.1-ಅತ್ತೆ ಮನೆಗೆ ಬಂದಿದ್ದ ಅಳಿಯನನ್ನು ಉಸಿರುಗಟ್ಟಿಸಿ ಕೊಂದು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೂಗನೂರು ಗ್ರಾಮದ ನಾಗರಾಜು ಅಲಿಯಾಸ್ ಉಪೇಂದ್ರ (೩೬) ಕೊಲೆಯಾದ ವ್ಯಕ್ತಿ.

ಹೆಂಡತಿಯ ಅಕ್ರಮ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ನಾಗರಾಜು ನಂಜನಗೂಡು ತಾಲೂಕಿನ ಮಾಕನಪುರದ ಮಹದೇವಶೆಟ್ಟಿ ಹಾಗೂ ಕಾಳಮ್ಮ ಪುತ್ರಿ ಮಣಿ ಎಂಬುವಳನ್ನು ಮದುವೆಯಾಗಿದ್ದ. ತವರು ಮನೆಯಲ್ಲಿದ್ದ ಹೆಂಡತಿಯನ್ನು ನೋಡಲು ವಾರದ ಹಿಂದೆ ಮಾಕನಪುರಕ್ಕೆ ಬಂದಿದ್ದ.

ಈತನನ್ನು ಮೊನ್ನೆ ರಾತ್ರಿ ಉಸಿರುಗಟ್ಟಿಸಿ ಕೊಂದು ಜೋಳದ ಹೊಲದಲ್ಲಿ ಸುಟ್ಟಿದ್ದಾರೆ. ಅರೆಬೆಂದ ದೇಹವನ್ನು ಕಂಡು ಬೆಚ್ಚಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತನ ಹೆಂಡತಿ ಹಾಗೂ ಪೋಷಕರ ವಿಚಾರಣೆ ನಡೆಸುತ್ತಿದ್ದಾರೆ. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: