ಪ್ರಮುಖ ಸುದ್ದಿಮೈಸೂರು

ಮೈಸೂರಲ್ಲಿ ವಿಜ್ಞಾನಲೋಕ ದರ್ಶನ

dscn0780ತರಗತಿಯಲ್ಲಿ ಕುಳಿತು ಪ್ರಾಧ್ಯಾಪಕರ ಪಾಠ ಕೇಳುತ್ತಾ ನೋಟ್ ಬುಕ್ ನಲ್ಲಿ ಗೀಚಿಕೊಳ್ಳುತ್ತಿದ್ದ ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾವೇ ಸ್ವತಃ ಪ್ರಯೋಗಗಳನ್ನು ಮಾಡುವ ಸದಾವಕಾಶ ದೊರೆತದ್ದು ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಹಾಲ್ ಮುಂಭಾಗ ಅಂತಾರಾಷ್ಟ್ರೀಯ ಸ್ಟೆಮ್ ಸಂಸ‍್ಥೆ (International STEM Organization) ಏರ್ಪಡಿಸಿದ್ದ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಸ್ತು ಪ್ರದರ್ಶನದಲ್ಲಿ.

ಹೌದು, ಇಲ್ಲಿ ಥಿಯರಿ ಪಾಠ ಕೇಳಿ ಬೋರ್ ಆಗ್ತಾ ಇದೆ ಎಂದು ಹೇಳುವ ಮಾತೇ ಇಲ್ಲ. ಎಲ್ಲವೂ ಪ್ರಯೋಗಾತ್ಮಕವಾಗಿ ರೂಪುಗೊಂಡಿರುವ ಪ್ರಯೋಗಾಲಯದಂತಿದೆ. ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿದ್ಯಾರ್ಥಿಗಳಂತೂ ಇಲ್ಲಿನ ಪ್ರಯೋಗಗಳನ್ನು ನೋಡಲು, ತಾವೇ ಸ್ವತಃ ಮಾಡಲು ಮುಗಿಬೀಳುತ್ತಿದ್ದರು.

ವಸ್ತುಪ್ರದರ್ಶನದಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ಸಂಸ್ಥೆಯು ವಿಜ್ಞಾನ ಲೋಕಕ್ಕೆ ಸಂಬಂಧಿಸಿದ ಹೊಸ ಹೊಸ ಪ್ರಯೋಗಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಒಂದು ಪ್ರಯತ್ನ ಮಾಡಿದೆ. ಕೋನ್ ರನ್ಸ್ ಅಪ್ ಹಿಲ್ (Cone runs uphill) ಅಂದರೆ ಶಂಖುವನ್ನು ಇಳಿಜಾರಿನಲ್ಲಿ ಇಟ್ಟರೆ ಅದು ಬೆಟ್ಟ ಹತ್ತುವ ರೀತಿ ಮೇಲ್ಮುಖವಾಗಿ ಚಲಿಸುತ್ತಿತ್ತು.

ಡಿಜಿಟಲ್ ಫ್ಲಿಪ್ ಬುಕ್ ನಲ್ಲಿ ನಾವು ಪುಸ್ತಕದ ಹಾಳೆಗಳನ್ನು ತೆಗೆಯುತ್ತಿದ್ದರೆ, ಕಂಪ್ಯೂಟರ್ ಪರದೆಯ ಮೇಲೆ ಆ ಪುಟ ಕಾಣಿಸುತ್ತಿತ್ತು. ಮೈಂಡ್ ಗೇಮ್ ನಲ್ಲಿ ಒಂದು ಯಂತ್ರವನ್ನು ಹಣೆಗೆ ಜೋಡಿಸಿ ಅದು ನಮ್ಮ ಮಿದುಳಿನ ಪ್ರಕ್ರಿಯೆಯನ್ನು ಗ್ರಹಿಸುತ್ತದ್ದಂತೆ ಅದಕ್ಕೆ ಜೋಡಣೆ ಮಾಡಿದ್ದ ಆಟಿಕೆ ಕಾರೊಂದು ಚಲಿಸುತ್ತಿದ್ದುದ್ದು ಒಂದು ಕುತೂಹಲಕಾರಿ ವಿಷಯವಾಗಿ ಕಂಡುಬಂದಿತು. ನಾವು ನೀರಿನಲ್ಲಿ ಸುಳಿ ಇರುವುದನ್ನು ಕೇಳಿದ್ದೇವೆ. ಆದರೆ ಆ ಸುಳಿಯ ಒಳಪರಿಚಲನೆ ಹೇಗಿರುತ್ತದೆಂದು ನಮಗೆ ಗೊತ್ತಿರುವುದಿಲ್ಲ. ಅದನ್ನು ತೋರಿಸುವ ಪ್ರಯೋಗವೂ ಸಹ ಇಲ್ಲಿ ನಡೆದಿತ್ತು. ಹೀಗೆ ಒಂದೇ ಎರಡೇ…! ಒಂದೊಂದು ಪ್ರಯೋಗವೂ ಒಂದೊಂದು ಮಾಹಿತಿಯನ್ನೂ ಪ್ರಾಯೋಗಿಕವಾಗಿ ನೀಡುತ್ತಿತ್ತು.

ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯವು ತನ್ನ ಬೇಸ್ ಸಂಸ್ಥೆಯ ಮೂಲಕ ಬಾಹ್ಯಾಕಾಶ ಲೋಕದ ನೂತನ ಕುತೂಹಲಕಾರಿ ಪ್ರಯೋಗಗಳನ್ನು ಮಾಡಿತ್ತು. ಬಾಹ್ಯಾಕಾಶದಲ್ಲಿನ ಇತರ ಗ್ರಹಗಳು ಭೂಮಿಯೂ ಸೇರಿಂದತೆ. ಒಂದು ಹೊಸ ಅನುಭವವನ್ನು ನೀಡುತ್ತಿತ್ತು. ಅಂದರೆ ಅಲ್ಲಿ ಜೋಡಿಸಿದ್ದ ತೂಕದ ಯಂತ್ರವು ಭೂಮಿ ಮಾತ್ರವಲ್ಲದೆ, ಎಲ್ಲ ಗ್ರಹಗಳಲ್ಲಿನ ನಮ್ಮ ತೂಕವನ್ನು ತೋರಿಸುತ್ತಿತ್ತು. ಇದಂತೂ ವಿದ್ಯಾರ್ಥಿಗಳಿಗೆ ಸಾಕಷ್ಟು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ, ಪ್ರಾಧ್ಯಾಪಕರು, ವೈದ್ಯರು ನಾಗರಿಕರು ಇಲ್ಲಿಗೆ ಭೇಟಿ ನೀಡಿ ಹೊಸದೊಂದು ಅನುಭವವನ್ನು ಕಂಡುಕೊಳ್ಳುತ್ತಿದ್ದರು. ಎಟಿಎಮ್ಈ ಕಾಲೇಜು ಮತ್ತು ಜೆಎಸ್ಎಸ್ ಕಾಲೇಜು ವಿದ್ಯಾರ್ಥಿಗಳು ಪ್ರಯೋಗಗಳನ್ನು ತಾವೇ ಸ್ವತಃ ಮಾಡುತ್ತಾ ಅದರ ಬಗೆಗೆ ಬರುತ್ತಿದ್ದ ಅನುಮಾನಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು.

ಪ್ರಾಧ್ಯಾಪಕರಾದ ಶಿವಕುಮಾರ್ ಅವರು ‘ಸಿಟಿಟುಡೇ’ಯೊಂದಿಗೆ ಮಾತನಾಡಿ, ಇದೊಂದು ವಂಡರ್ ಫುಲ್ ಕಾನ್ಸೆಪ್ಟ್. ಭಾರತದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಇಂತಹ ಒಂದು ವಸ್ತು ಪ್ರದರ್ಶನ ಏರ್ಪಡಿಸಿರುವುದು ತುಂಬಾ ಸಂತಸದ ವಿಚಾರವಾಗಿದೆ. ವಿದ್ಯಾdscn0788ರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ ಎಂದರು.

“ವಿವಿಧ ಕ್ಷೇತ್ರಗಳಲ್ಲಿ ಪ್ರತಿದಿನ ಹೊಸ ಹೊಸ ಚಿಂತನೆಗಳು ಉದ್ಭವಿಸುತ್ತವೆ. ಇಂತಹ ಒಂದು ಅವಕಾಶದಿಂದಾಗಿ ಹೊಸದನ್ನು ಕಲಿಯಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗಂತೂ ಹೆಚ್ಚಿನ ರೀತಿಯಲ್ಲಿ ಉಪಯೋಗವಾಗುತ್ತದೆ ಎಂದು ಮಾನಸಗಂಗೋತ್ರಿಯ ವಿದ್ಯಾರ್ಥಿನಿ ಅಭಿಪ್ರಾಯಪಟ್ಟರು.

ಎಟಿಎಮ್ಇ ಕಾಲೇಜಿನ ಪ್ರಾಧ್ಯಾಪಕಿ ಮಾತನಾಡಿ, ತರಗತಿಗಳಲ್ಲಿ ರೋಬೋಟಿಕ್ ಬಗ್ಗೆ ಕೇವಲ ಥಿಯರಿ ಪಾಠಗಳನ್ನು ಹೇಳುತ್ತಿದ್ದೆವು. ಆದರೆ ಅದನ್ನು ಪ್ರಾಯೋಗಿಕವಾಗಿ ಕಲಿಯಲು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶ ಸಿಕ್ಕಂತಾಗಿದೆ. ಅದರಲ್ಲೂ ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉಪಕಾರಿಯಾಗಿದೆ ಎಂದು ಹೇಳಿದ್ದಾರೆ.

ಪ್ರದರ್ಶನವು ಅ.17 ರಿಂದ ಆರಂಭವಾಗಿದ್ದು, ಅ.20, ಗುರುವಾರದ ವರೆಗೆ ನಡೆಯಲಿದೆ.

  • ಲತಾ ಸಿ.ಜಿ.

Leave a Reply

comments

Related Articles

error: