ಮೈಸೂರು

ಹುಣ್ಣಿಮೆ ಕಾರ್ಯಕ್ರಮ: ಸಾಧಕರಿಗೆ ಸನ್ಮಾನ

ಚಾಮುಂಡಿಪುರಂನಲ್ಲಿರುವ ಆರಾಧ್ಯ ಮಹಾಸಭಾ ವತಿಯಿಂದ ಹುಣ್ಣಿಮೆ ಕಾರ್ಯಕ್ರಮವನ್ನು ಆಯೋಜಿಸಿ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿ, ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಚೇತನ್ ಪ್ರಭು ಆರಾಧ್ಯ ಪರಂಪರೆ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಕುರಿತು ಸುದೀರ್ಘ ಉಪನ್ಯಾಸ ನೀಡಿದರು. ಶಿಕ್ಷಕ ಯು.ಜಿ.ಮೋಹನ್ ಕುಮಾರ್ 108 ಮಹಾನ್ ವ್ಯಕ್ತಿಗಳ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದರು. ಆರಾಧ್ಯ ಮಹಾಸಭಾ ಅಧ್ಯಕ್ಷ ನಾಗಭೂಷಣಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಚೇತನ್ ಪ್ರಭು ಹಾಗೂ ಶಿಕ್ಷಕ ಕಲಾವಿದ ಯು.ಜಿ.ಮೋಹನ್ ಅವರನ್ನು ಸನ್ಮಾನಿಸಲಾಯಿತು.

Leave a Reply

comments

Related Articles

error: