ಮೈಸೂರು

ಕರುಣಾಮಯಿ ಫೌಂಡೇಷನ್ ನೆರವಿಗಾಗಿ ರಕ್ತದಾನ ಶಿಬಿರ

ಮೈಸೂರು,ಆ.1 : ಕರುಣಾಮಯಿ ವಿಶೇಷ ಮಕ್ಕಳ ತರಬೇತಿ ಶಾಲೆಯ ದೇಣಿಗೆಗಾಗಿ ಹಾಗೂ ಬಾಲಾಜಿ ಶ್ರೀನಿವಾಸನ್ ಪೋಷಕರಾದ ದಿ.ಕೆ.ಎಂ.ಶಂಕರ್ ಮತ್ತು ದಿ.ಪದ್ಮಿನಿ ಶಂಕರ್ ಅವರ ಸ್ಮರಣಾರ್ಥ  ರಕ್ತದಾನ ಶಿಬಿರವನ್ನು ಈಚೆಗೆ ಆಯೋಜಿಸಲಾಗಿತ್ತು.

ಜೀವಧಾರೆ ಬ್ಲಡ್ ಬ್ಯಾಂಕ್ ಆವರಣದಲ್ಲಿ ನಡೆದ ಶಿಬಿರದಲ್ಲಿ ಮಹಾಜನ ಕಾಲೇಜಿನ ವಿದ್ಯಾರ್ಥಿಗಳು, ಸ್ವಯಂ ಸೇವಕರು, ನೇಸರ ಗ್ರೂಪ್, ಕರುಣಾಮಯಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಎನ್.ಶ್ರೀಧರ್ ದೀಕ್ಷಿತ್ ಹೊನ್ನೇಗೌಡ, ಬಾಲಾಜಿ ಶ್ರೀನಿವಾಸನ್, ಜಿ.ಸಿ.ಬೆರಗು ಕುಮಾರ್, ಕೆ.ವಿ.ಸೌಮ್ಯ ಇನ್ನು ಮುಂತಾದವರು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: