ಮೈಸೂರು

ವಿಜಯಶ್ರೀಪುರ ಪ್ರಕರಣ: ಅ. 27ರ ವರೆಗೆ ಯಥಾಸ್ಥಿತಿ

ಮೈಸೂರಿನ ವಿಜಯಶ್ರೀಪುರ ಬಡಾವಣೆಯ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಅ.27ರ ವರೆಗೆ ಮುಂದೂಡಿದೆ.

ವಿವಾದಿತ ವಿಜಯಶ್ರೀಪುರದ ವಿಚಾರಣೆಯನ್ನು ಅ.19ರ ಮಧ್ಯಾಹ್ನ ಕೈಗೆತ್ತಿಕೊಂಡ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬೋಪಣ್ಣ ಅವರು ವಿಚಾರಣೆ ನಡೆಸಿ ಮುಂದೂಡಿದ್ದಾರೆ. ವಕೀಲ ಮಂಜುನಾಥ್ ಅವರು ಮುಡಾ ಪರ ವಾದ ಮಂಡಿಸುತ್ತಿದ್ದು ವಿಚಾರಣೆ ಅಪೂರ್ಣವಾದ ಹಿನ್ನೆಲೆಯಲ್ಲಿ ಅ. 27 ರ ವರೆಗೆ ಮುಂದೂಡಲಾಗಿದೆ. ಅಲ್ಲಿಯವರೆಗೆ ವಿಜಯಶ್ರೀಪುರದ ಬಡಾವಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದ್ದಾರೆ. ಅ. 27 ರ ವರೆಗೆ ನೆಮ್ಮದಿ. ಮುಂದೇನು ಎನ್ನುವ ಆತಂಕವು ಅಲ್ಲಿನ ನಿವಾಸಿಗಳಿಗೆ ಮನೆ ಮಾಡಿದೆ.

Leave a Reply

comments

Related Articles

error: