ಕರ್ನಾಟಕಪ್ರಮುಖ ಸುದ್ದಿ

ರೈತರ ಅನುಕೂಲಕ್ಕೆ ಕಪ್ಪುಬಿಳುಪಿನ ಪಹಣಿ ವಿತರಣೆ

ದಾವಣಗೆರೆ, ಆ. 02 : ಕಂದಾಯ ಇಲಾಖೆಯಿಂದ ರೈತರಿಗೆ/ಸಾರ್ವಜನಿಕರಿಗೆ ಗಣಕೀಕೃತ ಪಹಣಿಗಳನ್ನು ವಿತರಿಸುವ ಸೌಲಭ್ಯವನ್ನು 2001 ರಿಂದ ಜಾರಿಗೆ ತರಲಾಗಿದ್ದು, ಇದೀಗ ರೈತರಿಗೆ ಅನುಕೂಲವಾಗುವಂತೆ ತಂತ್ರಾಂಶದಲ್ಲೇ ಕಪ್ಪುಬಿಳುಪಿನ ಪಹಣಿ ಮುದ್ರಿಸಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರವು ಪ್ರಸ್ತುತ ಟೆಂಡರ್‍ದಾರರಿಂದ ನೀಲಿ ಬಣ್ಣದ ಪೂರ್ವ ಮುದ್ರಿತ ಪಹಣಿ (pre printed) ನಮೂನೆಯನ್ನು ಟೆಂಡರ್‍ದಾರರಿಂದ ಪಡೆದು, ಸದರಿ ನಮೂನೆಯಲ್ಲಿ ಭೂಮಿ ಡಾಟಾಬೇಸ್‍ನಿಂದ ಪಹಣಿಯ ಮಾಹಿತಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತ್ತು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಪಹಣಿ ಪತ್ರಿಕೆಗಳನ್ನು ಮುದ್ರಿಸಲು ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರ್ಕಾರವು ಸರಬರಾಜುದಾರರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿತ್ತು, ಇದರಿಂದ ರೈತರಿಗೆ ಪಹಣಿಗಳ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಅಂದರೆ ಬ್ಯಾಂಕುಗಳಿಂದ ಅಥವಾ ಯಾವುದಾದರೂ ಸಂಸ್ಥೆಯಿಂದ ಸಾಲ ಪಡೆಯಲು ಸರ್ಕಾರದಿಮದ ಪರಿಹಾರ ಪಡೆಯುವಾಗ ಬೆಲೆ ವಿಮೆಗಾಗಿ ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರಬರಾಜುದಾರರ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ತಂತ್ರಾಶದಲ್ಲಿಯೇ ಕಪ್ಪು ಬಿಳಪು ಬಣ್ಣದಲ್ಲಿ ಲೀಗಲ್ ಗಾತ್ರದ ಕಾಗದದ ಮೇಲೆ ಪಹಣಿಯನ್ನು ಮುದ್ರಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ಕಪ್ಪು ಬಿಳಪು ಗಾತ್ರದ ಪಹಣಿಯು ಎಲ್ಲಾ ಸುರಕ್ಷತಾ ಕ್ರಮ (Security Features) ಗಳನ್ನು ಒಳಗೊಂಡಿದ್ದು, ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳಾದ ವಿಶೆಷ ಪಹಣಿ ಗುರುತಿನ ಸಂಖ್ಯೆ, ಕ್ರಮ ಸಂಖ್ಯೆ, ಬಾರ್‍ಕೋಡ್, ಡಿಜಿಟಲ್ ಸಹಿಗಳನ್ನು ಒಳಗೊಂಡಿರುತ್ತದೆ. ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಇರುವ ನೀಲಿ ಬಣ್ಣದ ಪೂರ್ವ ಮುದ್ರಿತ ಪಹಣಿ ಪ್ರತಿಗಳ ದಾಸ್ತಾನು ಖಾಲಿಯಾಗುವವರೆಗೂ ಈ ಪಹಣಿ ಪ್ರತಿಗಳನ್ನೆ ವಿತರಿಸಲಾಗುವುದು. ದಾಸ್ತಾನು ಖಾಲಿಯಾದ ತರುವಾಯ ಕಪ್ಪು ಬಿಳಪು ಬಣ್ಣದಲ್ಲಿ ಲೀಗಲ್ ಗಾತ್ರದ ಮೇಲೆ ಪಹಣಿಯನ್ನು ಮುದ್ರಿಸಿ ಪಹಣಿ ಪ್ರತಿಗಳನ್ನು ವಿತರಿಸಲಾಗುವುದು.

ಸಾರ್ವಜನಿಕರು ಈ ಬದಲಾವಣೆಯನ್ನು ಗಮನದಲ್ಲಿರಿಸಿಕೊಂಡು ಯಾವುದೇ ಗೊಂದಲಕ್ಕೊಳಗಾಗದೇ ತಾಲ್ಲೂಕು ಕಛೇರಿಯ ಭೂಮಿ ಕೇಂದ್ರದಲ್ಲಿ ಅಟಲ್‍ಜೀ ಜನಸ್ನೇಹಿ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ಸರ್ಕಾರದಿಂದ ಪಹಣಿ ವಿತರಿಸಲು ಅನುಮತಿ ನೀಡಿರುವ ಖಾಸಗಿ ಕೇಂದ್ರಗಳಲ್ಲಿ ವಿತರಿಸಲಾಗುವ ಪಹಣಿ ಪತ್ರಿಕೆಗಳನ್ನು ಪಡೆದು ತಮ್ಮ ಅವಶ್ಯಕತೆಗಳಿಗೆ ಬಳಸಿಕೊಳ್ಳಲು ತಿಳಿಸಲಾಗಿದೆ.

ಹಾಗೂ ಸಾರ್ವಜನಿಕರಿಗೆ ಪಹಣಿಯನ್ನು ನಿಗದಿತ ಸಮಯಕ್ಕೆ ಪಡೆಯಲು ಅನುಕೂಲವಾಗುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಬದಲಾವಣೆಯನ್ನು ತರಲಾಗಿದೆ. ಸಾರ್ವಜನಿಕರು ಪಹಣಿ ಪತ್ರದ ನೈಜತೆಯನ್ನು www.landrecords.karnataka.gov.in ವೆಬ್‍ಸೈಟ್ ನಲ್ಲಿ ಪರಿಶೀಲಿಸುವಂತೆ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: