ಸುದ್ದಿ ಸಂಕ್ಷಿಪ್ತ

ಆ. 8: ಗುಂಡ್ಲುಪೇಟೆಯಲ್ಲಿ ನಿವೇಶನ ಹಂಚಿಕೆ ಮೇಳ

ಚಾಮರಾಜನಗರ, ಆ.2 :- ಕರ್ನಾಟಕ ಗೃಹಮಂಡಳಿಯು ಗುಂಡ್ಲುಪೇಟೆ ಪಟ್ಟಣದ ಪಂಜನಹಳ್ಳಿ ಬಡಾವಣೆಯಲ್ಲಿ ಖಾಲಿ ಉಳಿದಿರುವ ನಿವೇಶನಗಳನ್ನು ಸ್ಥಳದಲ್ಲಿಯೇ ಹಂಚಿಕೆ ಮಾಡುವ ಸಲುವಾಗಿ ಆಗಸ್ಟ್ 8ರಂದು ಬೆಳಿಗ್ಗೆ 11 ಗಂಟೆಯಿಂದ ಹಂಚಿಕೆ ಮೇಳ ನಡೆಸಲಿದೆ.

ಕರ್ನಾಟಕ ಗೃಹಮಂಡಳಿಯು ಪಂಜನಹಳ್ಳಿ ಬಡಾವಣೆಯಲ್ಲಿ ವಿವಿಧ ವರ್ಗದ ನಿವೇಶನಗಳನ್ನು ಎಲ್ಲಾ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಈಗಾಗಲೇ ಹಂಚಿಕೆ ಮಾಡಿದೆ. ಕೆಲ ಖಾಲಿ ಉಳಿದಿರುವ ನಿವೇಶನಗಳನ್ನು ಆಗಸ್ಟ್ 8ರಂದು ಹಂಚಿಕೆ ಮೇಳದಲ್ಲಿ ಹಂಚಲಿದೆ. ಆಸಕ್ತರು ನಿಗಧಿತ ಹಣ ಪಾವತಿಸಿ ಸ್ಥಳದಲ್ಲಿಯೇ ನಿವೇಶನ ಹಂಚಿಕೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಗೃಹಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ದೂ.ಸಂ. 0821-2343094 ಹಾಗೂ ಚಾಮರಾಜನಗರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೊಬೈಲ್ ಸಂಖ್ಯೆ 9448470311 ಸಂಪರ್ಕಿಸುವಂತೆ ತಿಳಿಸಿದೆ. (ಆರ್.ವಿಎಸ್,ಎಸ್.ಎಚ್)

Leave a Reply

comments

Related Articles

error: