ಮೈಸೂರು

ಮೈಸೂರಲ್ಲಿ ಅಂತಾರಾಷ್ಟ್ರೀಯ ಕಾರ್ಡಿಯಾಲಜಿ ಸಮ್ಮೇಳನ: ಮೆಯೋ ಕ್ಲಿನಿಕ್‍ನಲ್ಲಿ ಪೂರ್ವಭಾವಿ ಸಭೆ

ಮೈಸೂರಿನ ಜೆಎಸ್‍ಎಸ್‍ ಮಹಾವಿದ್ಯಾಲಯ ಮತ್ತು ಅಮೆರಿಕಾದ ಮಿನಿಸೋಟ ರಾಜ್ಯದ ರೊಚೆಸ್ಟರ್‍ನಲ್ಲಿರುವ ಮೇಯೊ ಕ್ಲಿನಿಕ್‍ಗಳ ಸಹಯೋಗದೊಂದಿಗೆ 2017ರಲ್ಲಿ ಮೈಸೂರಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಾರ್ಡಿಯಾಲಜಿ ಸಮ್ಮೇಳನದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮೆಯೋ ಕ್ಲಿನಿಕ್‍ನಲ್ಲಿ ಪೂವ್ರಭಾವಿ ಸಭೆ ನಡೆಯಿತು.

ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಮೆಯೋ ಕ್ಲಿನಿಕ್‍ನ ಉಪಾಧ್ಯಕ್ಷ ಡಾ.ಡಬ್ಲ್ಯು.ಡಬ್ಲ್ಯು. ಡೆಕ್ಕರ್‍ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎರಡು ಸಂಸ್ಥೆಗಳ ನಡುವೆ ಏರ್ಪಡಿಸಬಹುದಾದ ಇತರ ವೈಜ್ಞಾನಿಕ ಸಂಶೋಧನೆಗಳ ಮುಂದುವರಿಕೆ ಬಗೆಗೆ ಚರ್ಚಿಸಲಾಯಿತು.

ಜೆಎಸ್‍ಎಸ್‍ ವಿವಿ ಕುಲಪತಿಗಳಾದ ಡಾ. ಬಿ. ಸುರೇಶ್, ಜಿಯೋತಂತ್ರ ಔಷಧ ವಿಭಾಗದ ನಿರ್ದೇಶಕರು ಮತ್ತು ಹಿರಿಯ ಪ್ರಾಧ್ಯಾಪಕರಾದ ಡಾ. ರಿಚರ್ಡ್ ವೆನ್‍ಶಿಪ್‍ ಭೌಮ್, ಜೆಎಸ್‍ಎಸ್‍ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಚ್. ಬಸವನಗೌಡಪ್ಪ ಹಾಗೂ ಮೆಯೋ ಕ್ಲಿನಿಕ್ ಫಾರ್ಮಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಜೆಎಸ್‍ಎಸ್‍ ವಿವಿಯ ಅಂತಾರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥರಾದ ಡಾ. ಎನ್. ವಿಷಕಂಠಮೂರ್ತಿ ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: