ಮೈಸೂರು

ಅಧ್ಯಾಪಕರ ಕಿರುಕುಳ: ಕಾಲೇಜಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

ನಂಜನಗೂಡು,ಆ.2-ಪದವಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಕಾಲೇಜಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ತೃತೀಯ ಬಿ.ಎ. ವ್ಯಾಸಂಗ ಮಾಡುತ್ತಿರುವ ಪಿ.ಅಶೋಕ್ ಕುಮಾರ್ ಕಾಲೇಜಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ.

ನನ್ನ ಸಾವಿಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಗಣಿತಶಾಸ್ತ್ರ ಪ್ರಾಧ್ಯಾಪಕ ಸೋಮಶೇಖರ್ ನೀಡುತ್ತಿದ್ದ ಕಿರುಕುಳ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ. ಇದನ್ನು ತಡೆದ ವಿದ್ಯಾರ್ಥಿಗಳು ಅಶೋಕ್ ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿದ್ಯಾರ್ಥಿ ಬರೆದ ಡೆತ್ ನೋಟ್ ಇಂತಿದೆ: ನಾನು ಗಣಿತಶಾಸ್ತ್ರದ ಅಧ್ಯಾಪಕ ಸೋಮಶೇಖರ್ ಹಾಗೂ ಪ್ರಾಂಶುಪಾಲರಾದ ಸಿದ್ದರಾಜು ಅವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಕಾಲೇಜಿನ ಇವರಿಬ್ಬರೇ ಹೊಣೆಗಾರರು. ಏಕೆಂದರೆ ಪ್ರತಿದಿನ ನ್ಯಾಯ ಕೇಳಿದ್ದಕ್ಕೆ ಕಿರುಕುಳ ನೀಡುವುದರ ಜತೆಗೆ ನಂಜನಗೂಡಿನ ನ್ಯಾಯಾಲಯದಲ್ಲಿ 25,00000 ರೂ. ಗಳಿಗೆ ನನ್ನ ಮೇಲೆ ಹಾಗೂ ಸ್ನೇಹಿತರ ಮೇಲೆ ಕೇಸು ಹಾಕಿದ್ದಾರೆ. ನಾನು ಬಡವ ಬೇರೆ ದಾರಿ ಕಾಣದೇ ನಾನು ನ್ಯಾಯಾಲಯದ ಕೇಸಿನ ಕಾಫಿ ತೆಗೆದುಕೊಂಡು ಸೋಮಶೇಖರ್ ಬಳಿ ಹೋಗಿ ಸರ್ ಕೇಸ್ ವಾಪಸ್ ಪಡೆಯುವಂತೆ ಬೇಡಿಕೊಂಡೆ ಅದಕ್ಕೆ ಅವರು ನನ್ನ ವಿರುದ್ಧವೇ ದೂರು ನೀಡಿದ್ದೀಯಾ ನಿನ್ನ ಕಥೆ ಮುಗಿಸುತ್ತೇನೆ. ನಿಮ್ಮ ಜಾತಿಯವರಿಗೆ ಶಿಕ್ಷಣ ಕೊಡುತ್ತಿರುವುದೇ ಹೆಚ್ಚು ಅಂಥಹದರಲ್ಲಿ ನನ್ನ ವಿರುದ್ಧವೇ ಮಾತನಾಡುತ್ತೀಯಾ ನಿಮ್ಮ ಜಾತಿ ನಾಯಿಗಳಿಗೆಲ್ಲ ಬುದ್ಧಿ ಕಲಿಸುತ್ತೇನೆ ಎಂದು ಹೇಳಿದರು. ಆದ್ದರಿಂದ ಬೇಸತ್ತು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾನೆ. (ವರದಿ-ಎಸ್.ಎನ್, ಕೆ.ಎಸ್, ಎಂ.ಎನ್)

 

Leave a Reply

comments

Related Articles

error: