ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರು ಕೋರ್ಟ್ ಸಣ್ಣ ಪ್ರವೇಶದ್ವಾರ ಶಾಶ್ವತ ಬಂದ್

ಮೈಸೂರು ನ್ಯಾಯಾಲಯದ ಶೌಚಾಲಯದಲ್ಲಿ ಕಚ್ಛಾಬಾಂಬ್ ಸ್ಫೋಟ ಪ್ರಕರಣದಿಂದ ಎಚ್ಚೆತ್ತ ಜಿಲ್ಲಾಡಳಿತವು ಕೋರ್ಟ್ ಆವರಣದಲ್ಲಿರುವ ಸಣ್ಣ ಪ್ರವೇಶ ದ್ವಾರವನ್ನು ಶಾಶ್ವತವಾಗಿ ಬಂದ್ ಮಾಡಿದೆ.

ಕಳೆದ ಅಗಸ್ಟ್ 3 ರಂದು ಶೌಚಾಲಯದಲ್ಲಿ ಕಚ್ಛಾಬಾಂಬ್ ಸ್ಫೋಟಗೊಂಡು ಬಾಗಿಲು-ಕಿಟಕಿ ಗಾಜುಗಳು ಪುಡಿಪುಡಿಯಾಗಿ ದೇಶದ ಗಮನ ಸೆಳೆದಿತ್ತು. ಸಣ್ಣ ಪ್ರವೇಶ ದ್ವಾರವು ಚಾಮರಾಜಪುರಂ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಇದನ್ನು ಈಚೆಗೆ ಸಿಮೆಂಟ್ ಇಟ್ಟಿಗೆ ಬಳಸಿ ಗೋಡೆ ಕಟ್ಟುವ ಮೂಲಕ ಶಾಶ್ವತವಾಗಿ ಬಂದ್ ಮಾಡಲಾಗಿದೆ. ಸ್ಫೋಟ ನಡೆದ ಮೂರನೇ ದಿನಕ್ಕೆ ಕೋರ್ಟ್ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

Leave a Reply

comments

Related Articles

error: