ಮೈಸೂರು

50 ಲಕ್ಷ ರೂ. ಮೌಲ್ಯದ ಸಿದ್ಧ ಉಡುಪು ವಂಚನೆ: ಪ್ರಕರಣ ದಾಖಲು

ಕಾರ್ನಿವಲ್ ಕ್ಲಾತಿಂಗ್ ಕಂಪನಿಗೆ ಸೇರಿದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಸಿದ್ಧ ಉಡುಪುಗಳನ್ನು ಕಂಪನಿಯ ನೌಕರರೇ ಬೇರೆ ಕಂಪನಿಗೆ ಮಾರಾಟ ಮಾಡಿ ವಂಚಿಸಿರುವ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ನಿವಲ್ ಕಂಪನಿಯ ಗೋಕುಲ್ದಾಸ್ ಎಕ್ಸ್`ಪೋರ್ಟ್ನಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಅಜಯದಾಸ್ ಕಂಪನಿಗೆ ವಂಚಿಸಿ ಸುಮಾರು 50 ಲಕ್ಷ ರೂ. ಬೆಲೆಬಾಳುವ ರೆಡಿಮೇಡ್ ಜಾಕೆಟ್ ಗಳನ್ನು ಚೆನ್ನೈನಲ್ಲಿರುವ ತಂಬಾರಿಗೆ ತಲುಪಿಸುವ ಬದಲು ಚೆನ್ನೈನ ವಂಡೇಯರ್ ಪೇಟ್ ರಾಯಪುರಂ ಗೆ ತಲುಪಿಸಿದ್ದಾರೆ. ಇವರಿಗೆ ಫ್ಯಾಕ್ಟರಿಯ ಮ್ಯಾನೇಜರ್ ಸುರೇಶ್, ಸಾಗಾಣಿಕೆ ಸಹಾಯಕರು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿ ಪ್ರಕರಣವನ್ನು ದಾಖಲಿಸಲಾಗಿದೆ.

Leave a Reply

comments

Related Articles

error: