ಕರ್ನಾಟಕ

ಬ್ಯಾಂಕ್‍ ಸೌಲಭ್ಯಗಳ ಕುರಿತು ಅಧಿಕಾರಿಗಳು ಜನಸಾಮಾನ್ಯರಿಗೆ ತಿಳಿಸಬೇಕು : ಡಾ.ಹರೀಶ್‍ಕುಮಾರ್

ರಾಜ್ಯ(ಚಾಮರಾಜನಗರ)ಆ.2:- ಬ್ಯಾಂಕ್‍ ಸೌಲಭ್ಯಗಳ ಕುರಿತು ಅಧಿಕಾರಿಗಳು ಜನಸಾಮಾನ್ಯರಿಗೆ ತಿಳಿಸಬೇಕು.  ಪ್ರತಿಯೋರ್ವರು ಬ್ಯಾಂಕ್‍ನಲ್ಲಿ ಖಾತೆ ತೆರೆದರೆ  ಅನೂಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ತಿಳಿಸಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹಮ್ಮೀಕೊಂಡಿದ್ದ ಸಾಲದಮೇಳ ಹಾಗೂ ಬ್ಯಾಂಕ್ ಗೆ  ಸಂಬಂಧ ಪಟ್ಟ ವಿಚಾರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರದ ಯೋಜನೆಗಳಿಂದ ಆರ್ಥಿಕಮಟ್ಟ ಸುಧಾರಿಸಬೇಕಾದರೆ ಬ್ಯಾಂಕ್‍ಗಳ ಪಾತ್ರ ಮುಖ್ಯವಾದದ್ದು ಸರ್ಕಾರದಿಂದ ನೀಡುವ ಸಾಲ ಸೌಲಭ್ಯಗಳನ್ನೂ ಸಹ ಬ್ಯಾಂಕ್ ಮುಖಾಂತರವೇ ಪಡೆಯಬೇಕು ಎಂದರು.  ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಗಾಯತ್ರಿ ಮಾತನಾಡಿ ಬ್ಯಾಂಕ್‍ನ ಯಾವುದೆ ಯೋಜನೆಗಳನ್ನು ಜಾರಿಗೊಳಿಸುವಿಕೆ ಆಡಳಿತದ ಕರ್ತವ್ಯವಾದರೆ ಅವುಗಳಿಗೆ ಸಮರ್ಪಕ ಹಣಕಾಸಿನ ವಹಿವಾಟನ್ನು ಬ್ಯಾಂಕ್ ಗಳು  ನಡೆಸುತ್ತವೆ.  ಇಂತಹ ಸಾಲದ ಮೇಳ ಹಾಗೂ ಅರಿವು ಕಾರ್ಯಕ್ರಮ ಪ್ರತಿ 6 ತಿಂಗಳಿಗೊಮ್ಮೆ ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 10 ಜನ ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಛತ್ರಿಯನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಸಾಲದ ಮೇಳದಲ್ಲಿ ಸುಮಾರು 70 ಕ್ಕೂ  ಅಧಿಕ ಖಾತೆದಾರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: