ದೇಶ

ವಿದ್ಯಾರ್ಥಿಗೆ ಥಳಿಸುವ ವಿಡಿಯೋ ವೈರಲ್‍: ಪ್ರಾಂಶುಪಾಲ ಅಮಾನತು

ಪಾಟ್ನಾ: ಕಳೆದೊಂದು ವಾರದಿಂದ ಫೇಸ್‍ಬುಕ್‍ನಲ್ಲಿ ವೈರಲ್‍ ಆಗಿದ್ದ ವಿದ್ಯಾರ್ಥಿಗೆ ಸಹಪಾಠಿಗಳು ಥಳಿಸುವ ವಿಡಿಯೋದಲ್ಲಿದ್ದ ವಿದ್ಯಾರ್ಥಿಗಳು ಯಾವ ಶಾಲೆಗೆ ಸೇರಿದ್ದವರು ಎಂಬುದು ಪತ್ತೆಯಾಗಿದ್ದು, ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ.

“ನಾನು ದಲಿತನಾಗಿದ್ದು, ಕಲಿಕೆಯಲ್ಲಿ ಮುಂದಿದ್ದೆ. ಹೀಗಾಗಿಯೇ ಅಸೂಯೆಯಿಂದ ಆ ಇಬ್ಬರು ವಿದ್ಯಾರ್ಥಿಗಳು ಆ.22ರಂದು ನನಗೆ ಥಳಿಸಿದ್ದರು” ಎಂದು ಮುಜಾಫರ್‍ನಗರದ ಕೇಂದ್ರಿಯ ವಿದ್ಯಾಲಯದಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ.

ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ರಾಜೀವ್‍ ರಂಜನ್‍ ಅವರನ್ನು ಅ.19ರಂದು ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗೆ ಥಳಿಸಿದ ಸಹೋದರರಿಬ್ಬರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

“ಆತ 1ನೇ ಕ್ಲಾಸಿನಲ್ಲಿದ್ದಾಗಲೇ ನಾನು ಆತನನ್ನು ದತ್ತು ತೆಗೆದುಕೊಂಡಿದ್ದೇನೆ. ಯಾವುದೇ ಗಲಾಟೆ ಮಾಡದಂತೆ ಆತನಿಗೆ ಮೊದಲಿನಿಂದಲೂ ಬುದ್ಧಿ ಹೇಳುತ್ತಾ ಬಂದಿದ್ದೆ. ಆತನ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲೂ ಭಯದಿಂದಾಗಿ ಪೊಲೀಸರ ಬಳಿ ಹೋಗಿರಲಿಲ್ಲ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿರುವುದರಿಂದ ನಾವು ಬಾಯಿ ಬಿಟ್ಟಿದ್ದೇವೆ. ನಮಗೆ ಪೊಲೀಸ್ ರಕ್ಷಣೆಯ ಅಗತ್ಯವಿದೆ” ಎಂದು ಥಳಿತಕ್ಕೊಳಗಾದ ವಿದ್ಯಾರ್ಥಿಯ ತಾತ ಹೇಳಿಕೆ ನೀಡಿದ್ದಾರೆ. ಅವರು ಅಂಚೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲಕನ ತಂದೆ ಹಳ್ಳಿಯಲ್ಲಿ ಶಾಲಾ ಶಿಕ್ಷಕರಾಗಿದ್ದು, ಅವರಿಗೆ ಇನ್ನಿಬ್ಬರು ಹೆಣ್ಣುಮಕ್ಕಳಿದ್ದಾರೆ.

ಒಟ್ಟಿನಲ್ಲಿ, ಘಟನೆ ನಡೆದು ತುಂಬಾ ದಿನಗಳು ಕಳೆದಿದ್ದರೂ ಈ ಬಗ್ಗೆ ಯಾರಿಗೂ ಮಾಹಿತಿ ಸಿಕ್ಕಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗುತ್ತಿದ್ದಂತೆ ಒಂದು ವಾರದೊಳಗೆಯೇ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣವು ಈ ರೀತಿಯ ಉತ್ತಮ ಕಾರ್ಯಗಳಿಗೆ ಉಪಯೋಗವಾಗುತ್ತಿರುವುದು ಉತ್ತಮ ಬೆಳವಣಿಗೆ.

Leave a Reply

comments

Related Articles

error: