ಕರ್ನಾಟಕಪ್ರಮುಖ ಸುದ್ದಿ

ಹೊಸ 4ಜಿ ಸೆಟ್‍ ಖರೀದಿಸುವವರಿಗೆ ಏರ್ಟೆಲ್‍ 10 ಜಿಬಿ ಡಾಟ

ಬೆಂಗಳೂರು: ಜಿಯೋ ಅಬ್ಬರದಿಂದ ಕಂಗೆಟ್ಟಿರುವ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ವಿನೂತನ ಪ್ಲಾನ್‍ಗಳನ್ನು ನೀಡುತ್ತಿದ್ದು ಇದ್ಯಾವುದೂ ಜಿಯೋಗೆ ಸರಿ ಹೊಂದುವ ಮಟ್ಟದಲ್ಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಗ್ರಾಹಕರನ್ನು ತನ್ನತ್ತ ಸೆಳೆಯಲು ಏರ್ಟೆಲ್ ಮತ್ತೊಂದು ನೂತನ ಪ್ಲಾನ್‍ ಆರಂಭಿಸಿದೆ. ಹೊಸ 4ಜಿ ಮೊಬೈಲ್‍ ಫೋನ್ ಖರೀದಿಸುವ ಗ್ರಾಹಕರಿಗೆ 265 ರೂ.ನಲ್ಲಿ 10 ಜಿಬಿ (3ಜಿ/4ಜಿ) ಡೇಟಾ ನೀಡುವುದಾಗಿ ಘೋಷಿಸಿದೆ. 1 ಜಿಬಿಯನ್ನು ಮೊಬೈಲ್‍ ಖರೀದಿಸಿದ ತಕ್ಷಣ ನೀಡಲಾಗುವುದು. ಉಳಿದ 9 ಜಿಬಿ ಡೇಟಾವನ್ನು ಮೈ ಏರ್‍ಟೆಲ್‍ ಆ್ಯಪ್‍ ಮೂಲಕ ಪಡೆಯಬಹುದು. ಡೇಟಾ 28 ದಿನಗಳ ಅವಧಿಯಾಗಿದ್ದು, ಗ್ರಾಹಕರು 90 ದಿನಗಳಲ್ಲಿ ಗರಿಷ್ಠ 3 ರಿಚಾರ್ಜ್ ಮಾಡಬಹುದು ಎಂದು ಭಾರ್ತಿ ಏರ್ಟೆಲ್‍ ನಿರ್ದೇಶಕ ಅಜಯ್ ಪುರಿ ತಿಳಿಸಿದ್ದಾರೆ.

Leave a Reply

comments

Related Articles

error: