ಸುದ್ದಿ ಸಂಕ್ಷಿಪ್ತ

ಕಲಾತರಂಗ ಚಿತ್ರಕಲಾ ಪ್ರದರ್ಶನ ಆ.3 ರಿಂದ 6ರವರೆಗೆ

ಮೈಸೂರು,ಆ.2 : ಮೈಸೂರು ಜಿಲ್ಲಾ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ ಸಮೂಹ ‘ಕಲಾತರಂಗ’ದಿಂದ ಆ.3 ರಿಂದ 6ರವರೆಗೆ, ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಚಿತ್ರಕಲಾ ಪ್ರದರ್ಶನವನ್ನು ರವಿವರ್ಮ ಕಲಾಶಾಲೆಯಲ್ಲಿ ಆಯೋಜಿಸಿದೆ.

ಆ.3ರ ಬೆಳಗ್ಗೆ 11.30ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ವಿಶ್ರಾಂತ ಕಾವಾ ಡೀನ್ ಪ್ರೊ.ರಾಮದಾಸ ಅಡ್ಯಂತಾಯ ಮತ್ತು ರವಿವರ್ಮ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಶಿವಕುಮಾರ ಕೆಸರಮುಡು ಇವರುಗಳು ಪಾಲ್ಗೊಳ್ಳುವರು.

ಶಿಕ್ಷಕರಾದ ಕೆ.ಸುರೇಶ್ ಮತ್ತು ವೀರಣ್ಣ ಕರಡಿಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: