ಪ್ರಮುಖ ಸುದ್ದಿಮೈಸೂರು

ನಂಜನಗೂಡಿನಲ್ಲಿ ವಿಶ್ವದರ್ಜೆಯ ಫಿಲ್ಮ್ ಸಿಟಿ

ಬೆಂಗಳೂರು: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿಶ್ವದರ್ಜೆಯ ಚಿತ್ರ ನಗರಿ(ಫಿಲ್ಮ್ ಸಿಟಿ) ನಿರ್ಮಿಸಲು 110 ಎಕರೆ ಭೂಮಿ ಮಂಜೂರು ಮಾಡುವ ಪ್ರಸ್ತಾಪಕ್ಕೆ ರಾಜ್ಯ ಸರಕಾರ ಗ್ರೀನ್‍ ಸಿಗ್ನಲ್‍ ನೀಡಿದೆ.

ಬುಧವಾರ ಸಂಪುಟ ಸಭೆ ಈ ಪ್ರಸ್ತಾವನೆಗೆ ಅಸ್ತು ಎಂದ ಹಿನ್ನೆಲೆಯಲ್ಲಿ ಬಹುದಿನಗಳ ಕನಸಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಸಿಟಿ ನಿರ್ಮಾಣದ ಕನಸು ಶೀಘ್ರದಲ್ಲೇ ಸಾಕಾರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ನಂಜನಗೂಡು ಬಳಿ 110 ಎಕರೆ ಭೂಮಿಯನ್ನು ಮಂಜೂರು ಮಾಡಲು ಸಂಪುಟ ಒಪ್ಪಿದ್ದು, 5 ವರ್ಷಗಳೊಳಗೆ ಭೂಮಿಯ ಬೆಲೆಯನ್ನು ಭರಿಸುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ(ಕೆಸಿಎ)ಗೆ ಸೂಚಿಸಿದೆ. ರಾಜ್ಯ ಸರಕಾರವು ಈ ಭೂಮಿಯನ್ನು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡುತ್ತಿದ್ದು, ಪೂರ್ತಿ ಮೊತ್ತವನ್ನು ಕಟ್ಟಲು 5 ವರ್ಷ ಕಾಲಾವಕಾಶ ಕೇಳಿದ ಕೆಸಿಎ ಮನವಿಗೆ ಒಪ್ಪಿಗೆ ಸೂಚಿಸಿದೆ.

ಈ ಫಿಲ್ಮ್ ಸಿಟಿ ನಿರ್ಮಾಣದಿಂದ ಕನ್ನಡ ಚಿತ್ರರಂಗ ಇನ್ನಷ್ಟು ಅಭಿವೃದ್ಧಿ ಹೊಂದುವುದಲ್ಲದೆ, ಖಾಸಗಿ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ಸರ್ಕಾರ ಆರಂಭಿಸಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

 

Leave a Reply

comments

Related Articles

error: