ಸುದ್ದಿ ಸಂಕ್ಷಿಪ್ತ

ಆ.20ರಂದು ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆ

ಮಡಿಕೇರಿ ಆ.02 : ರಾಷ್ಟ್ರೀಯ ಶಿಶು ಕಲ್ಯಾಣ ಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್‍ವೀಲ್, ರೋಟರಿ ಮಿಸ್ಟಿಹಿಲ್ಸ್, ಲಯನ್ಸ್ ಮತ್ತು ಲಯನೆಸ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್, 20 ರಂದು “ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆ” ನಡೆಯಲಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಲು ಆಗಸ್ಟ್, 18 ಕೊನೆ ದಿನವಾಗಿದೆ. ಸ್ಪರ್ಧಾ ವಿವರ ಮತ್ತು ಹೆಚ್ಚಿನ ಮಾಹಿತಿಗೆ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಚೇತನ ಚಿಲುಮೆ (ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರ) ದೂ.ಸಂ: 08272-229004, 9480745776 ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: