ಕರ್ನಾಟಕ

ಡಿಕೆಶಿ  ಮನೆಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತ : ಡಿ. ಬಸವರಾಜ್

ರಾಜ್ಯ(ದಾವಣಗೆರೆ)ಆ.2:- ಸ್ವಾತಂತ್ರ್ಯ ಭಾರತದ 70 ವರ್ಷಗಳ ಇತಿಹಾಸದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತವು ಸರ್ವಾಧಿಕಾರಿ ಹಿಟ್ಲರ್‍ನನ್ನು ಮೀರಿಸುವ ಹಂತ ತಲುಪಿದ್ದಾರೆ. ಮೋದಿಯ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುಜರಾತ್‍ನಲ್ಲಿ ರಾಜ್ಯಸಭಾ ಚುನಾವಣೆ ಇದೇ 8ರಂದು ನಡೆಯಲಿದ್ದು ಕಾಂಗ್ರೆಸ್ ಶಾಸಕರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್‍ಶಾ ಅಪರೇಷನ್ ಕಮಲಕ್ಕೆ ತಯಾರಾಗಿರುವುದನ್ನು ಮನಗಂಡು ಅಲ್ಲಿನ ಕಾಂಗ್ರೆಸ್ ಶಾಸಕರು ಬೆಂಗಳೂರಿನ ಈಗಲ್‍ಟನ್ ರೆಸಾರ್ಟ್ಸ್ ಗೆ  ಆಗಮಿಸಿ ರಕ್ಷಣೆ ಪಡೆದಿದ್ದಾರೆ. ಈ ಶಾಸಕರಿಗೆ ರಕ್ಷಣೆ ನೀಡಿದ ಕಾರಣಕ್ಕಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‍ರ ಮನೆ ಮತ್ತು ಕಛೇರಿಗಳ ಮೇಲೆ ಆದಾಯ ತರಿಗೆ ದಾಳಿ ನಡೆಸುವ ಮೂಲಕ ರಾಜಕೀಯ ಪ್ರೇರಿತ ಸೇಡಿನ ರಾಜಕಾರಣವನ್ನು ಮೋದಿ ಮತ್ತು ಅಮಿಷ್ ನಡೆಸಿದ್ದಾರೆಂದು ಟೀಕಿಸಿದರು. 70 ವರ್ಷಗಳ ಭಾರತದ ಆಡಳಿತದಲ್ಲಿ ಯಾವ ಪ್ರಧಾನಮಂತ್ರಿಯು ಐ.ಟಿ. , ಇಡಿ, ಸಿಬಿಐ ಮತ್ತು ಎಸ್‍ಐಟಿಗಳನ್ನು ದುರುಪಯೋಗ ಪಡಿಸಿರಲಿಲ್ಲ. ಆದರೆ ಮೋದಿಯ ನಡೆಯಿಂದ ಈ ಸಂಸ್ಥೆಗಳ ಮಾನ ಹರಾಜಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತವನ್ನು ನೀಡುತ್ತಿದ್ದು ಬರಲಿರುವ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗುವುದು ಈಗಾಗಲೇ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವರಿಕೆ ಆಗಿರುವುದರಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಈ ರೀತಿಯ ಐಟಿ ದಾಳಿಯನ್ನು ಮಾಡುವ ಮೂಲಕ ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಸಚಿವರು,  ಶಾಸಕರಿಗೆ ಒತ್ತಡ ತಂತ್ರ ರೂಪಿಸಲು ಐಟಿ ದಾಳಿಯನ್ನು ನಡೆಸಿದ್ದಾರೆಂದು ಖಂಡಿಸಿದರು. ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ ಅನಂತ್‍ಕುಮಾರ್, ಆರ್. ಅಶೋಕ್ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ಬಹುತೇಕರು ಕಪ್ಪು ಹಣವನ್ನು ಹೊಂದಿದ್ದು,   ಇವರ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಿ ಎಂದು ಆಗ್ರಹಿಸಿದರು.   ಇದೇ ಸಂದರ್ಭ  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್‍ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದು, ನನಗೆ ಬೆಂಗಳೂರು ಉತ್ತರ ಜಿಲ್ಲೆಯ ಕೆ.ಆರ್.ಪುರಂ. ವಿಧಾನಸಭಾ ಕ್ಷೇತ್ರ, ಹಾಗೂ ಯಲಹಂಕ ವಿಧಾನ ಕ್ಷೇತ್ರ ಮತ್ತು ಬೆಂಗಳೂರು ಸೆಂಟ್ರಲ್ ಜಿಲ್ಲೆಯ ಮಹಾದೇವಪುರ ವಿಧಾನಸಭಾ ಕ್ಷೇತ್ರ, ಹಾಗೂ ಸಿ.ವಿ. ರಾಮನ್ ನಗರ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಈ ಎರಡು ಜಿಲ್ಲೆಯ 4 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಅಲ್ಲಾವುಲ್ಲಿ ಘಾಜಿಖಾನ್, ಬಿ.ಎನ್. ವಿನಾಯಕ, ಹೆಚ್.ಜೆ. ಮೋಹಿದ್ದೀನ್, ಎ. ರಾಜಶೇಖರ್, ಯಾಸೀನ್‍ಪೀರ್‍ರಜ್ವಿ,  ಲಿಯಾಖತ್ ಅಲಿಖಾನ್, ಚಿಗಟೇರಿ ಆದಿತ್ಯ, ಮಂಜು ಜಿ.ಸಿ. ರಮೇಶ್ ಸೇರಿದಂತೆ ಇತರರು ಹಾಜರಿದ್ದರು.  (ಎಸ್.ಎಚ್)

 

Leave a Reply

comments

Related Articles

error: